ಬುಧವಾರ ಸಂಜೆ ಮುಂಬೈ ನಗರ ಮತ್ತು ಥಾಣೆಯಲ್ಲಿ ಮಿಂಚು ಮತ್ತು ಗುಡುಗು ಸಹಿತ ಭಾರಿ ಮಳೆಯಾಗಿದೆ. ಏಕಾಏಕಿ ವೈಪರೀತ್ಯ ಕಾಣಿಸಿಕೊಂಡಿದ್ದು, ಬದಲಾವಣೆಗಳನ್ನು ಜನ ಗಮನಿಸಿದ್ದಾರೆ.
ಹವಾಮಾನ ವೈಪರೀತ್ಯವನ್ನು ಅನುಭವಿಸಿದ ನೆಟ್ಟಿಗರು ತಮ್ಮ ಟ್ವಿಟರ್ ಹ್ಯಾಂಡಲ್ಗಳಲ್ಲಿ ಚಿತ್ರಗಳು ಮತ್ತು ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ. ಇದು ಮಾತ್ರವಲ್ಲದೆ ಹವಾಮಾನ ವೈಪರೀತ್ಯದ ಪರಿಣಾಮವಾಗಿ ಥಾಣೆ ಮಾರುಕಟ್ಟೆಯಲ್ಲಿ ವಿದ್ಯುತ್ ವ್ಯತ್ಯಯ ಕಂಡುಬಂದಿದೆ.
ಸೆಪ್ಟೆಂಬರ್ 9-11 ರವರೆಗೆ ಮುಂಬೈ, ಥಾಣೆ ಮತ್ತು ಪಾಲ್ಘರ್ಗೆ ಯಲ್ಲೋ ಅರ್ಲಟ್ ನೀಡಿದ್ದು, ಭಾರೀ ಮಳೆಯಾಗುವ ಸೂಚನೆಯನ್ನು ನೀಡಿದೆ.
ನಾನು ಕ್ಷೌರ ಮಾಡಲು ಹೋದಾಗ ಉತ್ತಮ, ಪ್ರಕಾಶಮಾನವಾದ ಮತ್ತು ಬಿಸಿಲು. ನಾನು ಹೊರಗೆ ಬರುವಷ್ಟರಲ್ಲಿ ಕತ್ತಲು, ಗುಡುಗು, ಸುರಿಮಳೆಯಾಗುತ್ತಿತ್ತು. ಅಲ್ಲಿ ಏನಾಯಿತು ಎಂದು ಒಬ್ಬರು ಬರೆದುಕೊಂಡಿದ್ದಾರೆ. ಮಳೆಯ ಅಬ್ಬರ, ರಸ್ತೆಯಲ್ಲಿ ನಿಂತ ನೀರು ಫೋಟೋವನ್ನು ಜನರು ಹಂಚಿಕೊಂಡಿದ್ದಾರೆ.
ಪಾಲ್ಘರ್, ರಾಯಗಡ್, ನಾಸಿಕ್ ಮತ್ತು ಪುಣೆಯಲ್ಲಿ ಭಾರೀ ಮತ್ತು ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿರುವುದರಿಂದ ರೆಡ್ ಅರ್ಲಟ್ ಘೋಷಿಸಲಾಗಿದೆ. ಐಎಂಡಿಯಿಂದ ಮೀನುಗಾರರಿಗೆ ಎಚ್ಚರಿಕೆಯನ್ನೂ ನೀಡಲಾಗಿದೆ.