ಬೆಳಿಗ್ಗೆ ಹಾಗೂ ಸಂಜೆಯ ವೇಳೆಯಲ್ಲಿ ಭಾರೀ ಜನದಟ್ಟಣೆ ಕಾಣುವ ಮುಂಬಯಿ ಉಪನಗರ ರೈಲುಗಳಲ್ಲಿ ಕಳ್ಳರಿಗೆ ತಮ್ಮ ಕಸುಬು ನಡೆಸಲು ಹುಲುಸಾದ ಅವಕಾಶಗಳನ್ನು ಸೃಷ್ಟಿಸುತ್ತಿವೆ.
ಈ ವರ್ಷದ ಜನವರಿಯಿಂದ ಜೂನ್‌ವರೆಗೂ ರೈಲ್ವೇ ಪೊಲೀಸರು ಒಟ್ಟಾರೆ 2,654 ಪ್ರಕರಣಗಳನ್ನು ದಾಖಲಿಸಿದ್ದಾರೆ. ಇವುಗಳ ಪೈಕಿ 2,543 ಪ್ರಕರಣಗಳು ಕಳ್ಳತನಕ್ಕೆ ಸಂಬಂಧಿಸಿದ್ದವೇ ಆಗಿವೆ.
ಕೊರೊನಾದಲ್ಲಿ ತಂದೆ-ತಾಯಿ ಕಳೆದುಕೊಂಡ ವಿದ್ಯಾರ್ಥಿನಿ ಮಾಡಿದ್ದಾಳೆ ಈ ಸಾಧನೆ
ಈ ಅವಧಿಯಲ್ಲಿ ಕಳ್ಳತನದಿಂದಾಗಿ ಪ್ರಯಾಣಿಕರಿಗೆ ಒಟ್ಟಾರೆ 5.25 ಕೋಟಿ ರೂಪಾಯಿ ಮೌಲ್ಯದ ಬೆಲೆ ಬಾಳುವ ವಸ್ತುಗಳನ್ನು ಕಳೆದುಕೊಳ್ಳಬೇಕಾಗಿ ಬಂದಿದೆ.
ದಾಖಲಾಗಿರುವ ದೂರುಗಳ ಪೈಕಿ ಕೇವಲ 907 ಪ್ರಕರಣಗಳನ್ನು ಮಾತ್ರವೇ ಇತ್ಯರ್ಥ ಪಡಿಸಲು ಸಾಧ್ಯವಾಗಿದ್ದು, 1.58 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಮಾತ್ರವೇ ಹಿಂದಕ್ಕೆ ಪಡೆಯಲು ಸಾಧ್ಯವಾಗಿದೆ.