ಮುಂಬೈ ನಗರ ಪೊಲೀಸರು ತಮ್ಮ ಟ್ವಿಟರ್, ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಜನರಿಗೆ ಸುರಕ್ಷತೆ ಕುರಿತು ಸಲಹೆಗಳು, ಮುನ್ನೆಚ್ಚರಿಕೆಗಳನ್ನು ನೀಡುವ ಜತೆಗೆ ಬಹಳ ಕ್ರಿಯಾಶೀಲ ಪೋಸ್ಟ್‌ಗಳಿಂದ ಜನಪ್ರಿಯತೆ ಗಳಿಸಿದ್ದಾರೆ.
ಈ ಮುನ್ನ ಮುಂಬೈ ನಗರದ ಜನಪ್ರಿಯ ಪ್ರದೇಶಗಳ ಹೆಸರನ್ನು ಬಳಸಿಕೊಂಡು ಅವರು ಕಾನೂನು ಉಲ್ಲಂಘನೆ ವಿರುದ್ಧ ಅಭಿಯಾನ ನಡೆಸಿದ್ದರು. ಈ ’ಪನ್’ ಶಬ್ದಗಳಿಗೆ ನೆಟ್ಟಿಗರು ಫಿದಾ ಆಗಿದ್ದರು.
ಬಸ್ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್: ಹಬ್ಬಕ್ಕೆ ಊರಿಗೆ ಹೊರಟವರಿಗೆ KSRTC ಯಿಂದ 1 ಸಾವಿರ ಹೆಚ್ಚುವರಿ ಬಸ್ ಸಂಚಾರ
ಸದ್ಯ, ’ರೆಸ್ಪೆಕ್ಟ್’ ಎಂದು ಇಂಗ್ಲಿಷ್ ಪದವನ್ನು ಹಾಕುವ ಮೂಲಕ ಪೊಲೀಸರು ಮತ್ತೊಂದು ಕ್ರಿಯೇಟಿವ್ ಸಂದೇಶ ರವಾನಿಸಿದ್ದಾರೆ. ‘ಮಹಿಳೆಯರ ಜತೆಗೆ ಅಸಭ್ಯವಾಗಿ ವರ್ತಿಸಬೇಡಿರಿ. ಅವರಿಗೆ ಸಾಮಾಜಿಕ ಗೌರವ ನೀಡಿ’ ಎನ್ನುವುದನ್ನು ರೆಸ್ಪೆಕ್ಟ್ ಪದದ ಇಂಗ್ಲಿಷ್ ಅಕ್ಷರ ಬಿತ್ತರದ ಜತೆಗೆ ಹಿನ್ನೆಲೆ ಧ್ವನಿಯಾಗಿ ಅಮೆರಿಕದ ಖ್ಯಾತ ಗಾಯಕಿ ಅರೆಥಾ ಫ್ರಾಂಕ್ಲಿನ್ ದನಿಯನ್ನು ಸೇರಿಸಿ ಪೋಸ್ಟ್ ಹಾಕಲಾಗಿದೆ.
ತಾಯಿ ಕೃಪೆ ತೋರಿದ್ರೆ ನೀಡ್ತಾಳೆ ಈ ಸಂಕೇತ
ನಾಗರಿಕ ಹಕ್ಕುಗಳ ಪರ ಹೋರಾಟ ಮತ್ತು ಮಹಿಳಾ ಹಕ್ಕುಗಳ ಪರವಾದ ಅಭಿಯಾನಗಳಲ್ಲಿ ವಿಶ್ವಾದ್ಯಂತ ಫ್ರಾಂಕ್ಲಿನ್ ಅವರು ಹಾಡಿರುವ ’ರೆಸ್ಪೆಕ್ಟ್’ ಗೀತೆಯನ್ನು ಕ್ರಾಂತಿಪದವಾಗಿ, ಐಕ್ಯತೆಯ ಗೀತೆಯಾಗಿ ಬಳಸಿಕೊಳ್ಳಲಾಗುತ್ತಿದೆ. ಅದನ್ನೇ ಮುಂಬೈ ಪೊಲೀಸರು ವಿಭಿನ್ನವಾಗಿ ಪೋಸ್ಟ್ ಮೂಲಕ ಜನರಿಗೆ ಮುಟ್ಟಿಸಿದ್ದಾರೆ.
ಪೋಸ್ಟ್ ಅಡಿಬರಹದಲ್ಲಿ ಪೊಲೀಸರು, ’ ಗೌರವ (ರೆಸ್ಪೆಕ್ಟ್) ಕೊಟ್ಟು ಪಡೆಯುವುದನ್ನು ಅಭ್ಯಾಸ ಮಾಡಿಕೊಂಡು ನೋಡಿರಿ. ಅದು ಎಷ್ಟು ಉತ್ತಮ ಅಭ್ಯಾಸವೆಂದು ಅರಿವಾಗುತ್ತದೆ,’ ಎಂದು ಕಿವಿಮಾತು ಕೂಡ ಹೇಳಿದ್ದಾರೆ.
https://youtu.be/DuhXF9stwe4