alex Certify ನೆಟ್ಟಿಗರ ಗಮನ ಸೆಳೆದಿದೆ ಮುಂಬೈ ಪೊಲೀಸ್‌ ಪೋಸ್ಟ್ ಮಾಡಿದ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರ ಗಮನ ಸೆಳೆದಿದೆ ಮುಂಬೈ ಪೊಲೀಸ್‌ ಪೋಸ್ಟ್ ಮಾಡಿದ ವಿಡಿಯೋ

ಮುಂಬೈ ಪೊಲೀಸ್​ ಇಲಾಖೆ ಸೋಶಿಯಲ್​ ಮೀಡಿಯಾ ಖಾತೆಗಳನ್ನು ಹ್ಯಾಂಡಲ್​ ಮಾಡೋದ್ರಲ್ಲಿ ಎತ್ತಿದ ಕೈ ಅಂದರೆ ತಪ್ಪಾಗಲಾರದು. ತಮಾಷೆಯ ಮೂಲಕವೇ ಜನತೆಗೆ ಕಾನೂನು ಪಾಲನೆಯ ಸಂದೇಶವನ್ನು ಹೊಂದಿರುವ ಪೋಸ್ಟ್​ಗಳನ್ನು ಮುಂಬೈ ಪೊಲೀಸ್​ ಇಲಾಖೆ ಹಾಕುತ್ತದೆ.

ಸೋಶಿಯಲ್​ ಮೀಡಿಯಾದಲ್ಲಿ ಇತ್ತೀಚೆಗೆ ವಿಡಿಯೋವೊಂದು ವೈರಲ್​ ಆಗಿತ್ತು. ಇದರಲ್ಲಿ ಇಬ್ಬರು ಯುವಕರು ಹೆಲ್ಮೆಟ್​ ಧರಿಸದೇ ಬೈಕ್​ ಚಲಾವಣೆ ಮಾಡಿದ್ದರು. ಹಾಗೂ ವಿಡಿಯೋಗೆ ಹಿನ್ನಲೆ ಧ್ವನಿಯಾಗಿ ನಮ್ಮ ಹಣೆಬರಹ ಹೇಗಿದೆ ಅಂದರೆ ಜಮೀನು ಸಿಕ್ಕರೆ ಅದು ಮರುಭೂಮಿಯಾಗಿದೆ ಹಾಗೂ ಸಿಕ್ಕ ಸ್ನೇಹಿತರು ಕೂಡ ದ್ರೋಹಿಗಳಾಗಿದ್ದಾರೆ ಎಂಬ ಸಾಲನ್ನು ಬಳಸಲಾಗಿತ್ತು. ಈ ವಿಡಿಯೋದಲ್ಲಿ ಹಿಂದೆ ಕೂತ ಯುವಕ ಬೈಕ್​ ಸವಾರನಿಗೆ ಚಾಕು ಚುಚ್ಚಿದಂತೆ ನಟಿಸುತ್ತಾನೆ. ಹಾಗೂ ಆತ ಬೈಕಿನಿಂದ ಬಿದ್ದು ಹೋಗುತ್ತಾನೆ. ಬಳಿಕ ಮುಂಬದಿ ಸವಾರ ಬೈಕಿನಿಂದ ಬಿದ್ದಂತೆ ನಟಿಸುತ್ತಾನೆ.

ಹೆಲ್ಮೆಟ್​ ಇಲ್ಲದೇ ಬೈಕ್​ ಸವಾರಿ ಮಾಡಿದ ಈ ವಿಡಿಯೋ ಮುಂಬೈ ಪೊಲೀಸರ ಕಣ್ಣಿಗೆ ಬಿದ್ದಿದೆ. ಕೂಡಲೇ ಕ್ರಮ ಕೈಗೊಂಡ ಪೊಲೀಸರು ಈ ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್​ 279 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಮುಂಬೈ ಪೊಲೀಸ್​ ಇಲಾಖೆ ಈ ವಿಡಿಯೋವನ್ನು ಶೇರ್​ ಮಾಡಿದೆ. ಬಾರ್ಬಿ ಗರ್ಲ್​ಗಳ ಗಮನಕ್ಕೆ, ಇದೇ ನಿಜವಾದ ಜಗತ್ತು. ಜೀವನ ಪ್ಲಾಸ್ಟಿಕ್​ ಅಲ್ಲ. ಹೀಗಾಗಿ ಸುರಕ್ಷಿತ ಕಡೆಗೆ ಗಮನವಿರಲಿ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ. ನೀವು ರಚಿಸಿದಂತೆ ನಿಮ್ಮ ಜೀವನ ಇರುತ್ತದೆ ಎಂದು ಶೀರ್ಷಿಕೆ ನೀಡಲಾಗಿದೆ. ಈ ಪೋಸ್ಟ್​ ಸಿಕ್ಕಾಪಟ್ಟೆ ವೈರಲ್​ ಆಗಿದ್ದು 3.2 ಸಾವಿರಕ್ಕೂ ಅಧಿಕ ವೀವ್ಸ್ ಸಂಪಾದಿಸಿದೆ.

https://www.instagram.com/p/CSeyNMgoAXK/?utm_source=ig_web_copy_link

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...