ದೂರವಾಣಿ ಕರೆಯ ಜಾಡೊಂದು ದರೋಡೆಕೋರರನ್ನು ಕಂಬಿ ಎಣಿಸುವಂತೆ ಮಾಡುವಲ್ಲಿ ಪೊಲೀಸರಿಗೆ ನೆರವಾಗಿದೆ. ಮುಂಬೈನಲ್ಲಿ ಮೇ ಆರಂಭದಲ್ಲಿ ವೃದ್ಧ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದ ಮೂವರು ದರೋಡೆಕೋರರ ಗ್ಯಾಂಗ್ ತಪ್ಪಿಸಿಕೊಂಡಿತ್ತು. ಆದರೆ ಆರೋಪಿಗಳ ಪೈಕಿ ಒಬ್ಬನು ಸ್ವೀಕರಿಸಿದ ಫೋನ್ ಕರೆ ಮುಂಬೈ ಅಪರಾಧ ವಿಭಾಗದ ಜಾಡು ಹಿಡಿದು ಅವರ ಬಂಧನಕ್ಕೆ ಕಾರಣವಾಗಿದೆ.
ಕ್ರೈಂ ಬ್ರಾಂಚ್ ಅಧಿಕಾರಿಗಳ ಪ್ರಕಾರ, ಸಂತ್ರಸ್ತೆ, 72 ವರ್ಷ ವಯಸ್ಸಿನ ಮಹಿಳೆ. ಮಲಾಡ್‌ನ ಅಲ್ಕಾ ವಿಹಾರ್‌ನಲ್ಲಿರುವ ತನ್ನ ನಿವಾಸದಲ್ಲಿದ್ದರು. ಮೇ 7 ರಂದು ಕೊರಿಯರ್ ಹುಡುಗರಂತೆ ಪೋಸ್ ನೀಡಿದ್ದ ಆರೋಪಿಗಳು ಆಕೆಯ ಮನೆಯ ಡೋರ್‌ಬೆಲ್ ಅನ್ನು ಬಾರಿಸಿದ್ದರು. ಬಾಗಿಲು ತೆರೆದ ತಕ್ಷಣ, ಮೂವರು ಒಳಗೆ ನುಗ್ಗಿ ಹಲ್ಲೆ ನಡೆಸಿ ಬಂಧಿಸಿ ಬಾಯಿ ಮುಚ್ಚಿಸಿ ನಂತರ 1.87 ಲಕ್ಷ ರೂಪಾಯಿ ಮೌಲ್ಯದ ನಗದು ಮತ್ತು ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದರು.
ನಂತರ ಮಲಾಡ್ ಪೊಲೀಸರೊಂದಿಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಅಪರಾಧವನ್ನು ದಾಖಲಿಸಲಾಯಿತು ಮತ್ತು ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಅಪರಾಧ ವಿಭಾಗದ ಘಟಕಕ್ಕೆ ವರ್ಗಾಯಿಸಲಾಗಿತ್ತು.
BIG NEWS: ನಾಳೆ ಪೆಟ್ರೋಲ್ ಬಂಕ್ ಮಾಲೀಕರ ಮುಷ್ಕರ; ಪೆಟ್ರೋಲ್, ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯ ಸಾಧ್ಯತೆ
ನಾವು ಕಟ್ಟಡದ ಕ್ಲೋಸ್ಡ್ ಸರ್ಕ್ಯೂಟ್ ಟೆಲಿವಿಷನ್ (ಸಿಸಿಟಿವಿ) ಕ್ಯಾಮೆರಾ ದೃಶ್ಯ ಗಮನಿಸಿದ್ದು, ಆರೋಪಿಗಳ ಚಲನವಲನ ಪತ್ತೆಹಚ್ಚಿದ್ದೆವು. ಮೂವರಲ್ಲಿ ಒಬ್ಬರು ಫೋನ್ ಕರೆ ಸ್ವೀಕರಿಸಿದ್ದು, ಇದು ನಮಗೆ ನಿರ್ಣಾಯಕ ಸುಳಿವು ನೀಡಿತು. ನಾವು ನಂತರ ಹೆಚ್ಚಿನ ಲೀಡ್‌ಗಳಿಗಾಗಿ ಡೇಟಾ ವಿಶ್ಲೇಷಣೆ ಮಾಡಿದೆವು ಎಂದು ತನಿಖೆಯ ಭಾಗವಾಗಿದ್ದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ನಿರ್ದಿಷ್ಟ ಸೆಲ್ಯುಲಾರ್ ಟವರ್ ಮೂಲಕ ಹಾದುಹೋದ ಎಲ್ಲಾ ಸೆಲ್ ಫೋನ್ ಸಂಖ್ಯೆಗಳ ಡೇಟಾ ಪಡೆದು ವಿಶ್ಲೇಷಣೆ ಮಾಡಲಾಯಿತು. ಈ ವೇಳೆ ಆರೋಪಿಗೆ ಬಂದ ಫೋನ್ ಕರೆ ಪೊಲೀಸರ ಕೆಲಸ ಸುಲಭಗೊಳಿಸಿದೆ.
ಸಿಸಿಟಿವಿಯಲ್ಲಿದ್ದಂತೆ ನಿರ್ದಿಷ್ಟ ಸಮಯದಲ್ಲಿ ಕರೆಯಲ್ಲಿ ತೊಡಗಿರುವ ಸಂಖ್ಯೆಯನ್ನು ಹುಡುಕಿ, ಇದನ್ನು ಬಳಸಿಕೊಂಡು, ತನಿಖಾ ತಂಡವು ಒಂದು ಶಂಕಿತ ಸಂಖ್ಯೆಯನ್ನು ಪ್ರತ್ಯೇಕಿಸಿತು. ನಂತರ ಅದನ್ನು ಸಂತ್ರಸ್ತೆಯ ನಿವಾಸವನ್ನು ಒಳಗೊಂಡಿರುವ ಸೆಲ್ಯುಲಾರ್ ಟವರ್‌ನ ಡೇಟಾ ಡಂಪ್‌ನೊಂದಿಗೆ ಹೋಲಿಸಲಾಯಿತು.
ಕರೆಯ ಸಮಯ ಹೊಂದಾಣಿಕೆ ಕಾಣಿಸುತ್ತಿದ್ದಂತೆ, ಈ ಸಂಖ್ಯೆಯ ಕರೆ ವಿವರಗಳ ದಾಖಲೆಗಳನ್ನು (ಸಿಡಿಆರ್‌ಗಳು) ಪರಿಶೀಲಿಸಿ, ಇನ್ನೂ ಎರಡು ಶಂಕಿತ ಸಂಖ್ಯೆಗಳನ್ನು ಕಂಡುಹಿಡಿದರು ಮತ್ತು ಮೂರನ್ನೂ ಟ್ರ್ಯಾಕ್ ಮಾಡಲು ಪ್ರಾರಂಭಿಸಿದರು. ಅಷ್ಟೊತ್ತಿಗಾಗಲೇ ಮೂವರು ಶಂಕಿತರು ಉತ್ತರ ಪ್ರದೇಶ ತಲುಪಿದ್ದರು.
ಕಳೆದ ಭಾನುವಾರ ಯುಪಿಗೆ ತಂಡವನ್ನು ಕಳುಹಿಸಿದ್ದು, ಯುಪಿ ವಿಶೇಷ ಕಾರ್ಯಪಡೆಯೊಂದಿಗೆ ಸಮನ್ವಯದಿಂದ ಕೆಲಸ ಮಾಡಿ, ಮುಂದಿನ ಒಂದು ವಾರದಲ್ಲಿ, ಶಂಕಿತರ ಚಲನವಲನಗಳನ್ನು ಟ್ರ್ಯಾಕ್ ಮಾಡಲಾಯಿತು ಅಂತಿಮವಾಗಿ ಶುಕ್ರವಾರದಂದು ಯುಪಿಯ ಸಿದ್ಧಾರ್ಥ್ ನಗರದಲ್ಲಿ ಈ ಮೂವರನ್ನು ಭಾರತ-ನೇಪಾಳ ಗಡಿಯನ್ನು ದಾಟಲು ಹೊರಟಿದ್ದಾಗ ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.