ಮುಂಬೈ: ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದ ಕೊರೋನಾ ಇಳಿಮುಖವಾಗುತ್ತಿದೆ. ಮೊದಲ ಮತ್ತು ಎರಡನೆಯ ವೇಳೆ ಅಪಾರ ಜೀವ ಹಾನಿಯಾಗಿದ್ದು, ಬಹುತೇಕ ಎಲ್ಲ ವಲಯಗಳಿಗೂ ಸಂಕಷ್ಟ ಎದುರಾಗಿದೆ. ಈಗ ಮೂರನೇ ಅಲೆ ಎದುರಾಗುವ ಆತಂಕ ಇದೆ. ಆದರೆ, ಮೂರನೇ ಅಲೆ ಬರುವ ಸಾಧ್ಯತೆ ಇಲ್ಲವೆಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ನಿಂದ ಬಾಂಬೆ ಹೈಕೋರ್ಟ್ ಗೆ ಮಾಹಿತಿ ನೀಡಲಾಗಿದೆ.
ಮುಂಬೈ ನಗರ ಸುರಕ್ಷಿತವಾಗಿದ್ದು, ಕೋವಿಡ್ ಮೂರನೇ ಅಲೆ ಬರುವ ಸಾಧ್ಯತೆ ಇಲ್ಲವೆಂದು ತಿಳಿಸಲಾಗಿದೆ. ಮುಂಬೈ ಮಹಾನಗರದಲ್ಲಿ 42 ಲಕ್ಷ ಮಂದಿಗೆ 2 ಡೋಸ್, 82 ಲಕ್ಷ ಜನರಿಗೆ ಸಿಂಗಲ್ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ. ಲಸಿಕೆ ನೀಡಿಕೆ ಕಾರ್ಯ ಮುಂದುವರೆದಿದೆ. ಕೋವಿಡ್ ಮೂರನೇ ಅಲೆ ಬರುವ ಸಾಧ್ಯತೆ ಇಲ್ಲವೆಂದು ಬಿಎಂಸಿ ಯಿಂದ ಬಾಂಬೆ ಹೈಕೋರ್ಟ್ ಗೆ ಮಾಹಿತಿ ನೀಡಲಾಗಿದೆ.