alex Certify Watch Video: ಚಲಿಸುತ್ತಿರುವ ರೈಲು ಏರಲು ಹೋಗಿ ಕೆಳಕ್ಕೆ ಬಿದ್ದ ಪ್ರಯಾಣಿಕ; ಹೋಂ ಗಾರ್ಡ್ ಸಮಯಪ್ರಜ್ಞೆಯಿಂದಾಗಿ ಪ್ರಾಣಾಪಾಯದಿಂದ ಪಾರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch Video: ಚಲಿಸುತ್ತಿರುವ ರೈಲು ಏರಲು ಹೋಗಿ ಕೆಳಕ್ಕೆ ಬಿದ್ದ ಪ್ರಯಾಣಿಕ; ಹೋಂ ಗಾರ್ಡ್ ಸಮಯಪ್ರಜ್ಞೆಯಿಂದಾಗಿ ಪ್ರಾಣಾಪಾಯದಿಂದ ಪಾರು

Mumbai News: Passenger Slips While Boarding Local Train At Borivali Station, Alert Home Guard Officials Save Life; Dramatic Rescue Video Surfaces

ಚಲಿಸುತ್ತಿರುವ ರೈಲು ಏರಲು ಹೋಗಿ ಹಲವರು ಪ್ರಾಣ ಕಳೆದುಕೊಂಡಿರುವ ಘಟನೆಗಳು ಈಗಾಗಲೇ ಸಾಕಷ್ಟು ನಡೆದಿವೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ನಿದರ್ಶನಗಳೂ ಇವೆ. ಚಲಿಸುತ್ತಿರುವ ರೈಲು ಏರಲು ಯಾವುದೇ ಕಾರಣಕ್ಕೂ ಪ್ರಯತ್ನಿಸಬೇಡಿ ಎಂದು ರೈಲ್ವೆ ಇಲಾಖೆ ನಿರಂತರ ಮನವಿ ಮಾಡಿಕೊಳ್ಳುತ್ತಿದ್ದರೂ ಸಹ ಇದನ್ನು ನಿರ್ಲಕ್ಷಿಸುವ ಕೆಲ ಪ್ರಯಾಣಿಕರು ಜೀವಕ್ಕೆ ಅಪಾಯ ತಂದೊಡ್ಡಿಕೊಳ್ಳುತ್ತಿದ್ದಾರೆ.

ಇದೀಗ ಮುಂಬೈನಲ್ಲಿ ನಡೆದಿರುವ ಇಂಥವುದೇ ಮತ್ತೊಂದು ಘಟನೆಯಲ್ಲಿ ಚಲಿಸುತ್ತಿರುವ ಲೋಕಲ್ ರೈಲು ಹತ್ತಲು ಪ್ರಯತ್ನಿಸಿದ ಪ್ರಯಾಣಿಕನೊಬ್ಬ ಕೆಳಕ್ಕೆ ಬಿದ್ದಿದ್ದು, ರೈಲು ಹಾಗೂ ಫ್ಲಾಟ್ ಫಾರ್ಮ್ ನಡುವೆ ಸಿಲುಕಿದ್ದ ಆತನನ್ನು ಸಮಯ ಪ್ರಜ್ಞೆ ಮೆರೆದ ಹೋಂ ಗಾರ್ಡ್ ಒಬ್ಬರು ರಕ್ಷಿಸಿದ್ದಾರೆ. ಜುಲೈ 31 ರಂದು ಬೋರಿವಿಲಿ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಫ್ಲಾಟ್ ಫಾರಂ ಸಂಖ್ಯೆ 3ರಲ್ಲಿ ಲೋಕಲ್ ರೈಲು ಹತ್ತಲು ಯತ್ನಿಸಿದ ಪ್ರಯಾಣಿಕ ಈ ಪ್ರಯತ್ನದಲ್ಲಿ ವಿಫಲನಾಗಿ ಕೆಳಕ್ಕೆ ಬಿದ್ದಿದ್ದಾನೆ. ರೈಲು ಹಾಗೂ ಪ್ಲಾಟ್ಫಾರಂ ನಡುವೆ ಸಿಲುಕಿಕೊಂಡಿದ್ದ ಈತನನ್ನು ಕೆಲ ಮೀಟರ್ ಗಳವರೆಗೆ ರೈಲು ಎಳೆದುಕೊಂಡು ಹೋಗಿದ್ದು, ತಕ್ಷಣವೇ ಇದನ್ನು ಗಮನಿಸಿದ ಹೋಂ ಗಾರ್ಡ್ ಸಿಬ್ಬಂದಿ ಕೂಡಲೇ ಆತನನ್ನು ಹಿಡಿದು ಹೊರಕ್ಕೆಳಿದಿದ್ದಾರೆ. ಅದೃಷ್ಟವಶಾತ್ ಪ್ರಯಾಣಿಕ ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾನೆ. ಇದರ ಸಿಸಿ ಟಿವಿ ದೃಶ್ಯಾವಳಿಗಳನ್ನು ಮುಂಬೈ ಜಿ ಆರ್ ಪಿ ತನ್ನ ಸೋಶಿಯಲ್ ಮೀಡಿಯಾ ಅಕೌಂಟ್ ನಲ್ಲಿ ಹಂಚಿಕೊಂಡಿದ್ದು, ಪ್ರಯಾಣಿಕರು ಚಲಿಸುತ್ತಿರುವ ರೈಲು ಏರುವ ದುಸ್ಸಾಹಸಕ್ಕೆ ಕೈ ಹಾಕಬೇಡಿ ಎಂದು ಎಚ್ಚರಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...