ಅಕಾಲಿಕ ಮಳೆಯಿಂದಾಗಿ ಕನಸಿನ ನಗರಿ ಮುಂಬೈಗೆ ಬೇಸಿಗೆಯ ಬೇಗೆಯಿಂದ ಅಲ್ಪ ವಿರಾಮ ಸಿಕ್ಕಿದೆ. ಗುರುವಾರ ಮಧ್ಯರಾತ್ರಿ ಭಾರೀ ಗುಡುಗು ಹಾಗೂ ಸಿಡಿಲುಗಳು ಮುಂಬೈ ಆಗಸವನ್ನು ತುಂಬಿದ್ದವು.
ಕಳೆದ 49 ವರ್ಷಗಳಲ್ಲಿ ಏಪ್ರಿಲ್ ತಿಂಗಳಲ್ಲಿ ಮುಂಬೈಯಲ್ಲಿ ಸುರಿದ ಅತ್ಯಂತ ಭಾರೀ ಮಳೆ ಮೊನ್ನೆಯದ್ದಾಗಿದೆ.
ಇದೇ ವೇಳೆ ಮಳೆ ಹಾಗೂ ಗುಡುಗಿನ ದೃಶ್ಯಗಳನ್ನು ನಗರದ ಅನೇಕ ಛಾಯಾಗ್ರಾಹಕರು ಸೆರೆ ಹಿಡಿದಿದ್ದಾರೆ. ಮರಾಠಿ ನಟಿ ಮಿತಾಲಿ ಮಾಯೇಕರ್ ಈ ಗುಡುಗುಗಳ ಚಿತ್ರಗಳನ್ನು ಸೆರೆ ಹಿಡಿದು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದೇ ವೇಳೆ, ನಗರದ ಅನೇಕ ನೆಟ್ಟಿಗರು ಟ್ವಿಟರ್‌ನಲ್ಲಿ ಗುಡುಗು ಸಿಡಿಲಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.