ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪತ್ನಿ ರಶ್ಮಿ ಠಾಕ್ರೆ ಅವರ ಬಗ್ಗೆ ವಿವಾದಾತ್ಮಕ ಟ್ವೀಟ್ ಮಾಡಿರುವುದಕ್ಕಾಗಿ, ಮಹಾರಾಷ್ಟ್ರದ ಬಿಜೆಪಿಯ ಸಾಮಾಜಿಕ ಮಾಧ್ಯಮ ಸೆಲ್ ನ ಸದಸ್ಯನನ್ನು ಮುಂಬೈ ಪೊಲೀಸ್ ಕ್ರೈಂ ಬ್ರಾಂಚ್‌ನ ಸೈಬರ್ ಸೆಲ್ ವಿಚಾರಣೆಗಾಗಿ ವಶಕ್ಕೆ ಪಡೆದಿದೆ. ಜಿತೇನ್ ಗಜಾರಿಯಾ ಬಂಧಿತ ವ್ಯಕ್ತಿ.
ಉದ್ಧವ್ ಆರೋಗ್ಯ ಸಮಸ್ಯೆಗಳ ಬಗ್ಗೆ ಪರೋಕ್ಷವಾಗಿ, ಜನವರಿ 4 ರಂದು “ಮರಾಠಿ ರಾಬ್ರಿ ದೇವಿ” ಎಂಬ ಶೀರ್ಷಿಕೆಯೊಂದಿಗೆ ರಶ್ಮಿ ಠಾಕ್ರೆ ಫೋಟೋವನ್ನು ಪೋಸ್ಟ್ ಮಾಡಲಾಗಿತ್ತು.
ಮೇವು ಹಗರಣಕ್ಕೆ ಸಂಬಂಧಿಸಿದಂತೆ ಪತಿ ಲಾಲು ಪ್ರಸಾದ್ ರಾಜೀನಾಮೆ ನೀಡುವಂತೆ ಒತ್ತಾಯಿಸಿದಾಗ ಬಿಹಾರದಲ್ಲಿ, ಲಾಲು ಪತ್ನಿ ರಾಬ್ರಿ ದೇವಿ ಅವರು ಅಧಿಕಾರ ವಹಿಸಿಕೊಂಡರು. ಅಂತೆಯೆ ಉದ್ಧವ್ ಠಾಕ್ರೆ ತಮ್ಮ ಆರೋಗ್ಯ ಸಮಸ್ಯೆಗಳ ಕಾರಣವಾಗಿ ರಾಜೀನಾಮೆ ನೀಡಿದ್ಮೇಲೆ ರಶ್ಮಿ ಠಾಕ್ರೆ ಅಧಿಕಾರ ವಹಿಸಿಕೊಳ್ಳಬಹುದು ಎಂಬ ಅರ್ಥದಲ್ಲಿ ಜಿತೇನ್ ಟ್ವೀಟ್ ಮಾಡಿದ್ದರು.
ಟ್ವಿಟ್ಟರ್ ನಲ್ಲಿ 18.9 ಸಾವಿರ ಅನುಯಾಯಿಗಳನ್ನು ಹೊಂದಿರುವ ಮುಂಬೈ ನಿವಾಸಿ ಗಜಾರಿಯಾ ಅವರ ಮತ್ತೊಂದು ಟ್ವೀಟ್, ಅಜಿತ್ ಪವಾರ್ ವಿರುದ್ಧ ಮಾಡಿದ್ದರು.
ಜಿತೇನ್ ಅವರ ವಕೀಲ ಮತ್ತು ಬಿಜೆಪಿ ಕಾರ್ಯದರ್ಶಿ ವಿವೇಕಾನಂದ ಗುಪ್ತಾ, ಸೈಬರ್ ಪೊಲೀಸರು ಕಾರಣ ಮತ್ತು ದೂರುದಾರ ಯಾರು ಎಂದು ನಮೂದಿಸದೆ ಪೊಲೀಸ್ ಠಾಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಅವರ ಸೂಚನೆಗಳ ಪ್ರಕಾರ ನನ್ನ ಕಕ್ಷಿದಾರನು ಅವರ ಮುಂದೆ ಹಾಜರಾಗಿದ್ದಾರೆ ಆದರೆ ಈಗ ಒಂದು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಲಾಗುತ್ತಿದೆ ಎಂದಿದ್ದಾರೆ. ಪ್ರಕರಣದ ಬಗ್ಗೆ ಇನ್ನೂ ಎಫ್‌ಐಆರ್ ದಾಖಲಾಗಿಲ್ಲ.