ಭಾರತದಲ್ಲಿ ಟೀ ಪ್ರಿಯರಿಗೇನೂ ಕಮ್ಮಿಯಿಲ್ಲ. ವಿವಿಧ ಬಗೆಯ ಟೀ ದೇಶದ ಪ್ರತಿಯೊಂದು ರಸ್ತೆಯ ಮೂಲೆ ಮೂಲೆಗಳಲ್ಲಿ ಸಿಗುತ್ತದೆ. ಪುಟ್ಟ ಗೂಡಂಗಡಿಯಿಂದ ಹಿಡಿದು ಐಷಾರಾಮಿ ಹೋಟೆಲ್ ನಲ್ಲಿ ಬಗೆಬಗೆಯ ಟೀ ಲಭ್ಯವಿದೆ.
ಆದರೆ ನೀವೆಂದಾದರೂ ಆಡಿ ಕಾರ್ ನಲ್ಲಿ ಬಂದು ಟೀ ಮಾರುವವರನ್ನ ನೋಡಿದ್ದೀರಾ? ಇಂತಹ ಚಾಯ್ ವಾಲಾ ಮುಂಬೈನಲ್ಲಿದ್ದಾರೆ. ಅವರು ತಮ್ಮ ಐಷಾರಾಮಿ ಆಡಿ ಕಾರಿನಲ್ಲಿ ಬಂದು ಟೀ ಮಾರುತ್ತಾರೆ. ಈ ವಿಡಿಯೋವನ್ನ ಇನ್ಸ್ಟಾಗ್ರಾಂ ಬಳಕೆದಾರರು ಹಂಚಿಕೊಂಡಿದ್ದಾರೆ.
“ಮುಂಬೈನ ಲೋಖಂಡವಾಲಾ ಬ್ಯಾಕ್‌ರೋಡ್‌ನಲ್ಲಿ ರಸ್ತೆ ಬದಿಯಲ್ಲಿ ಆಡಿ ಕಾರಿನಲ್ಲಿ ಟೀ ಮಾರುತ್ತಿರುವ ವ್ಯಕ್ತಿ,” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಹಂಚಿಕೊಳ್ಳಲಾಗಿದೆ.
‘ಆಡಿ ಚಾಯ್‌ವಾಲಾ’ ವಿಡಿಯೋದಲ್ಲಿ ಸ್ಟಾಲ್‌ನ ಮಾಲೀಕ ಮನ್ನು ಶರ್ಮಾ ಅವರು ಬಿಳಿ ಬಣ್ಣದ ಆಡಿ ಕಾರನ್ನು ಚಲಾಯಿಸಿಕೊಂಡು ಬಂದು ಟೀ ಮಾರುವುದನ್ನ ನೋಡಬಹುದು.
ಅವರ ಉದ್ಯಮವನ್ನು ‘ಆನ್ ಡ್ರೈವ್ ಟೀ’ ಎಂದು ಕರೆಯಲಾಗುತ್ತದೆ. ‘ಥಿಂಕ್ ಲಕ್ಸುರಿ, ಡ್ರಿಂಕ್ ಲಕ್ಸುರಿ’ ಎಂಬುದು ಅವರ ಉದ್ಯಮದ ಅಡಿಬರಹ. ವೀಡಿಯೊದಲ್ಲಿ, ಶರ್ಮಾ ಅವರು ಚಹಾ ಮಾರಲು ತನ್ನ ಗೊತ್ತುಪಡಿಸಿದ ಸ್ಥಳಕ್ಕೆ ತೆರಳುತ್ತಾರೆ. ನಂತರ ಅವರು ತನ್ನ ಟೀ ಸ್ಟಾಲ್ ಅನ್ನು ಸ್ಥಾಪಿಸುತ್ತಾರೆ. ಈ ರೀತಿ ಲಕ್ಸುರಿಯಾಗಿ ಟೀ ಮಾರುವುದನ್ನ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.