alex Certify ಸೆಕೆಂಡ್-ಹ್ಯಾಂಡ್ ಟಿವಿ ವಿಚಾರವಾಗಿ ಜಗಳವಾಡಿ ಮಡದಿಯನ್ನು ಹತ್ಯೆಗೈದವನಿಗೆ ಜೀವಾವಧಿ ಶಿಕ್ಷೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಕೆಂಡ್-ಹ್ಯಾಂಡ್ ಟಿವಿ ವಿಚಾರವಾಗಿ ಜಗಳವಾಡಿ ಮಡದಿಯನ್ನು ಹತ್ಯೆಗೈದವನಿಗೆ ಜೀವಾವಧಿ ಶಿಕ್ಷೆ

ಕ್ಷುಲ್ಲಕ ಕಾರಣವೊಂದಕ್ಕೆ ಮಡದಿಯನ್ನು ಬರ್ಬರವಾಗಿ ಕೊಂದ ಮುಂಬಯಿಯ ವ್ಯಕ್ತಿಯೊಬ್ಬನಿಗೆ ಜೀವನವಿಡೀ ಜೈಲಿನಲ್ಲಿ ಕಳೆಯುವ ಶಿಕ್ಷೆಯನ್ನು ನ್ಯಾಯಾಲಯ ನೀಡಿದೆ.

2016ರಲ್ಲಿ ನಡೆದ ಘಟನೆಯಲ್ಲಿ, ಆಪಾದಿತ ಸಂತೋಷ್ ಅಂಬಾವಾಲೆ ಎಂಬ 42ರ ಹರೆಯದ ವ್ಯಕ್ತಿ, ಸೆಕೆಂಡ್-‌ಹ್ಯಾಂಡ್ ಟಿವಿ ಒಂದರ ವಿಚಾರವಾಗಿ ತನ್ನ ಮಡದಿಯೊಂದಿಗೆ ಜಗಳವಾಡಿದ್ದು, ಇದು ಅತಿರೇಕಕ್ಕೆ ಹೋಗಿ ಆಕೆಯನ್ನು ಕೊಂದಿದ್ದಾನೆ.

ಜೂಜಾಟದ ಚಟ ಬೆಳೆಸಿಕೊಂಡು ಸದಾ ತನ್ನ ಮಡದಿಯಿಂದ ದುಡ್ಡು ಕೀಳುತ್ತಿದ್ದ ಸಂತೋಷ್. ಟಿವಿಯನ್ನು ದಂಪತಿಗೆ ಮಾರಿದ್ದ ವ್ಯಕ್ತಿ ಅದರ ದುಡ್ಡು ಕೇಳಲು ಮನೆಗೆ ಬಂದ ವೇಳೆ, ಟಿವಿಗೆಂದು ತಾನು ಇಟ್ಟಿದ್ದ ದುಡ್ಡನ್ನು ತನ್ನ ಪತಿ ಬಳಸಿಕೊಂಡಿರುವುದಾಗಿ ಸಂತ್ರಸ್ತೆ ಆತನಿಗೆ ತಿಳಿಸಿದ್ದಾರೆ.

ಬರೋಬ್ಬರಿ 4,500 ಮಿಸ್ಡ್ ಕಾಲ್ ನಿಂದ ಬೆಚ್ಚಿ ಬಿದ್ದ ಮಹಿಳೆ..! ಇದರ ಹಿಂದಿತ್ತು ಒಂದು ಕಾರಣ

ಇದರಿಂದ ಸಿಟ್ಟಿಗೆದ್ದ ಸಂತೋಷ್ ತನ್ನ ಪತ್ನಿಗೆ ಚಾಕುವಿನಿಂದ ಇರಿದು ಮಾರಣಾಂತಿಕವಾಗಿ ಗಾಯಗೊಳಿಸಿದ್ದಾನೆ. ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಸಹ ಆಕೆ ಅಲ್ಲಿಯೇ ಮೃತಪಟ್ಟಿದ್ದಾರೆ. ಬಳಿಕ ಪತ್ನಿಯನ್ನು ಕೊಂದ ಆಪಾದನೆ ಮೇಲೆ ಸಂತೋಷ್‌ನನ್ನು ಪೊಲೀಸರು ಬಂಧಿಸಿದ್ದರು.

ಟಿವಿ ಮಾರಿದಾತನೂ ಸೇರಿ, ಅಕ್ಕ-ಪಕ್ಕದ ಮನೆ ಮಂದಿಯನ್ನು ಕರೆಯಿಸಿ, ಒಟ್ಟಾರೆ 11 ಮಂದಿ ಸಾಕ್ಷಿಗಳ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ರಾಕೇಶ್ ತಿವಾರಿ ಈ ಶಿಕ್ಷೆಯ ಆದೇಶ ಹೊರಡಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...