ಮುಂಬೈ: ಬಾಲಕಿಯೊಬ್ಬಳಿಗೆ ಮದುವೆಯಾಗುವಂತೆ ರಸ್ತೆಯಲ್ಲೇ ಕೈ ಹಿಡಿದಳದ ಆರೋಪಿಗೆ ಒಂದು ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ.
ಹುಡುಗಿಯ ಸಂಬಂಧಿಯಾಗಿದ್ದರೂ ಆಕೆಯ ಒಪ್ಪಿಗೆ ಇಲ್ಲದೆ ದೇಹವನ್ನು ಸ್ಪರ್ಶಿಸುವ ಹಕ್ಕು ಪುರುಷನಿಗೆ ಇಲ್ಲ ಎಂದು ಮುಲುಂಡ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಹೇಳಿದೆ. 13 ವರ್ಷಗಳ ಹಿಂದೆ ಶಾಲೆಯಿಂದ ಮನೆಗೆ ಮರಳುತ್ತಿದ್ದ 16 ವರ್ಷದ ಹುಡುಗಿಗೆ ಆಕೆಯ ಸಂಬಂಧಿಯಾಗಿರುವ ವ್ಯಕ್ತಿ ಕೈ ಹಿಡಿದೆಳೆದು ತನ್ನನ್ನು ಮದುವೆಯಾಗಲು ಪೀಡಿಸಿದ್ದ.
2009ರ ಫೆಬ್ರವರಿ 2 ರಂದು ಭಾಂಡುಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗ 9ನೇ ತರಗತಿ ಓದುತ್ತಿದ್ದ ಬಾಲಕಿ ಶಾಲೆ ಮುಗಿಸಿ ಮನೆಗೆ ಹೋಗುವಾಗ ತನ್ನನ್ನು ಮದುವೆಯಾಗುವಂತೆ ಕೈಹಿಡಿದು ಎಳೆದಿದ್ದ. ಆಕೆಯನ್ನು ರಕ್ಷಿಸಲು ಹೋಗಿದ್ದ ಸಹೋದರಿಗೆ ಕಪಾಳಮೋಕ್ಷ ಮಾಡಿದ್ದ. ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆರ್.ಡಿ. ಡಾಂಗೆ ಆರೋಪಿಗೆ 1 ಸಾವಿರ ರೂಪಾಯಿ ದಂಡ ಮತ್ತು ಒಂದು ತಿಂಗಳ ಜೈಲು ಶಿಕ್ಷೆ ವಿಧಿಸಿದ್ದಾರೆ.