ಭಾರತೀಯ ಸಂಪ್ರದಾಯ ಅಲ್ಲವಾದರೂ ಕೂಡ ಕಳೆದೊಂದು ದಶಕದಿಂದ ಜನ್ಮದಿನದಂದು ಸ್ನೇಹಿತರನ್ನು ಕರೆದು, ಅವರ ಎದುರು ಕೇಕ್ ಒಂದನ್ನು ಕಟ್ ಮಾಡಿ ಆಪ್ತರಿಗೆ ತಿನ್ನಿಸುವ ಅಭ್ಯಾಸ ಎಲ್ಲರ ಮನೆಗಳಲ್ಲೂ ನಡೆದುಕೊಂಡು ಬರುತ್ತಿದೆ.
ಸ್ವಲ್ಪ ಆರ್ಥಿಕವಾಗಿ ಸ್ಥಿತಿವಂತರು 1-2 ಕೇಕ್ ಗಳನ್ನು ಕಟ್ ಮಾಡುತ್ತಾರೆ. ಅದರಲ್ಲೂ ಮಕ್ಕಳಂತೂ ಕನಿಷ್ಠ ಒಂದು ಕೇಕ್ ಕಟ್ ಮಾಡಿ, ಸ್ನೇಹಿತರ ಎದುರು ಸಂಭ್ರಮ ಪಡಲೇಬೇಕು. ಶ್ರೀಮಂತಿಕೆ ಹೆಚ್ಚಿದ್ದವರು 2-3 ಕೇಕ್‌ಗಳನ್ನು ಕತ್ತರಿಸಿ, ತಿಂದು ಖುಷಿಪಡುತ್ತಾರೆ.
ʼರೆಸ್ಟೋರೆಂಟ್ʼಗಳಲ್ಲಿ ಪಾತ್ರೆ ತೊಳೆದಿದ್ದರಂತೆ ರತನ್ ಟಾಟಾ…!
ಇಲ್ಲೊಬ್ಬ ಭೂಪ, ಜನ್ಮದಿನಕ್ಕೆ ಬರೋಬ್ಬರಿ 550 ಕೇಕ್‌ಗಳನ್ನು ಕಟ್ ಮಾಡಿದ್ದಾನೆ ! ಮುಂಬಯಿನ ಈ ವ್ಯಕ್ತಿಯ ಹೆಸರು ’ಸೂರ್ಯ ರತೌರಿ’. ಮೂರು ಟೇಬಲ್‌ಗಳ ಮೇಲೆ ಜೋಡಿಸಲಾದ ಕೇಕ್‌ಗಳನ್ನು ಎರಡೂ ಕೈಗಳಲ್ಲಿ ಚಾಕುವನ್ನು ಹಿಡಿದು ಸೂರ್ಯ ಕತ್ತರಿಸಿಕೊಂಡು ಹೋಗುವ 3 ನಿಮಿಷಗಳ ವಿಡಿಯೊ ವೈರಲ್ ಆಗಿದೆ.
ಕೆಲವು ಕೇಕ್‌ಗಳ ಮೇಲೆ ಪಟಾಕಿ ರೀತಿ ಚಿಮ್ಮುವ ಕ್ಯಾಂಡಲ್‌ಗಳು ಕೂಡ ಕಾಣಬಹುದಾಗಿದೆ. ಈ ಪಾರ್ಟಿ ನಡೆದಿರುವುದು ಅಕ್ಟೋಬರ್ 12ರಂದು, ಕಾಂಡಿವಲಿ ಪ್ರದೇಶದಲ್ಲಿ.
ಈ ವಧು ಧರಿಸಿದ ಚಿನ್ನಾಭರಣಗಳ ತೂಕ ಗೊತ್ತಾದ್ರೆ ದಂಗಾಗೋದು ಗ್ಯಾರಂಟಿ
ಸದ್ಯ ಕೋವಿಡ್-19 ಸೋಂಕು ತಡೆ ನಿರ್ಬಂಧ ಇರುವ ಕಾರಣ ಜನಸಂದಣಿ ಸೇರುವಂತಹ ಕಾರ್ಯಕ್ರಮಗಳ ಆಯೋಜನೆ ಮಾಡುವಂತಿಲ್ಲ. ಜತೆಗೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಆದರೆ, 550 ಕೇಕ್ ಕಟ್ ಮಾಡುವ ವೇಳೆ ಈ ಎಲ್ಲ ಮುನ್ನೆಚ್ಚರಿಕೆಗಳನ್ನು ಗಾಳಿಗೆ ತೂರಲಾಗಿದೆ. ಹಾಗಾಗಿ ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಅಧಿಕಾರಿಗಳು ಸ್ಥಳೀಯರಿಂದ ದೂರು ಪಡೆದು ಕೇಕ್ ಪಾರ್ಟಿಯ ವಿರುದ್ಧ ಕ್ರಮ ಜರುಗಿಸಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.