ಕೆಲವರು ಹೊಟೇಲ್ ನಿಂದ ಕೆಲ ವಸ್ತುಗಳನ್ನು ತರ್ತಿರುತ್ತಾರೆ. ಈ ವಿಷ್ಯಕ್ಕೆ ಟ್ರೋಲ್ ಆಗ್ತಿರುತ್ತಾರೆ. ಈಗ ಹೊಟೇಲ್ ನಲ್ಲಿ ತಂಗಿದ್ದ ವ್ಯಕ್ತಿಯೊಬ್ಬನ ವಿರುದ್ಧ ದೂರು ದಾಖಲಾಗಿದೆ. ವ್ಯಕ್ತಿ ತನ್ನ ಮಗನ ಜೊತೆ ಕಳೆದ 8 ತಿಂಗಳಿಂದ ಹೊಟೇಲ್ ನಲ್ಲಿ ವಾಸವಾಗಿದ್ದ. ಆದ್ರೀಗ ಹೊಟೇಲ್ ಬಿಲ್ ಪಾವತಿ ಮಾಡದೆ ಓಡಿ ಹೋಗಿದ್ದಾನೆ.
8 ತಿಂಗಳ ಹಿಂದೆ ನವಿ ಮುಂಬೈನ ಹೋಟೆಲ್ ನಲ್ಲಿ ವ್ಯಕ್ತಿಯೊಬ್ಬ ರೂಮ್ ಬುಕ್ ಮಾಡಿದ್ದ. ಹೊಟೇಲ್ ಬಿಲ್ 25 ಲಕ್ಷ ರೂಪಾಯಿ ಬಂದಿದೆ. ವ್ಯಕ್ತಿ ಬಿಲ್ ಪಾವತಿ ಮಾಡದೆ ಬಾತ್ರೂಮ್ ಕಿಟಕಿಯಿಂದ ಓಡಿ ಹೋಗಿದ್ದಾನೆ. ಈತನ ಹೆಸರು ಮುರಳಿ ಕಾಮತ್ ಎನ್ನಲಾಗಿದೆ. ಈತ ಮೂಲತಃ ಅಂಧೇರಿಯವನು.
ಹೊಟೇಲ್ ಗೆ ಗುರುತಿನ ಚೀಟಿಯಾಗಿ ಪಾಸ್ ಪೋರ್ಟ್ ನೀಡಿದ್ದನಂತೆ. ಹೋಟೆಲ್‌ನಲ್ಲಿ ಎರಡು ಕೊಠಡಿಗಳನ್ನು ಕಾಯ್ದಿರಿಸಿದ್ದನಂತೆ. ಮುರಳಿ ವಿರುದ್ಧ ಹೋಟೆಲ್ ಮಾಲೀಕರು, ಪೊಲೀಸರಿಗೆ ದೂರು ನೀಡಿದ್ದಾರೆ. ಸೂಪರ್ ಡಿಲಕ್ಸ್ ರೂಮ್ ಬುಕ್ ಮಾಡಿದ್ದ ಮುರಳಿ, ಬಿಲ್ ಕೇಳಿದಾಗ ಇನ್ನೊಂದು ತಿಂಗಳು ಬಿಟ್ಟು ನೀಡುವುದಾಗಿ ಹೇಳಿದ್ದನಂತೆ. ವ್ಯಕ್ತಿ ಲ್ಯಾಪ್ ಟಾಪ್ ಹಾಗೂ ಮೊಬೈಲನ್ನು ಕೊಠಡಿಯಲ್ಲೇ ಬಿಟ್ಟು ಹೋಗಿದ್ದಾನೆಂದು ಹೊಟೇಲ್ ಮಾಲಿಕರು ಹೇಳಿದ್ದಾರೆ.