ನಗರದ ಜೀವನಾಡಿ ಎಂದೇ ಕರೆಯಲ್ಪಡುವ ಮುಂಬೈನ ಸ್ಥಳೀಯ ರೈಲುಗಳು ಜನದಟ್ಟಣೆಗೆ ಪ್ರಸಿದ್ಧವಾಗಿವೆ. ಇದೀಗ, ರೈಲಿನಿಂದ ಹತ್ತಲು ಪ್ರಯತ್ನಿಸುತ್ತಿರುವ ಪ್ರಯಾಣಿಕರ ಮಧ್ಯೆ ವ್ಯಕ್ತಿಯೊಬ್ಬ ರೈಲಿನಿಂದ ಇಳಿಯಲು ಹರಸಾಹಸ ಪಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಸ್ಪಿರಿಟ್ ಆಫ್ ಮುಂಬೈ ಕಿಂಡಾ ಕಾಲೇಶ್ ಎಂಬ ಶೀರ್ಷಿಕೆಯೊಂದಿಗೆ @gharkekalesh ಎಂಬ X ಖಾತೆಯಲ್ಲಿ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ರೈಲಿನಿಂದ ಇಳಿಯುತ್ತಿದ್ದಾನೆ. ಆದ್ರೆ ರೈಲು ಹತ್ತುವ ಜನರು ಆತನಿಗೆ ಹೊರಗೆ ಬರಲು ಬಿಡ್ತಿಲ್ಲ.
ಜನರನ್ನು ತಳ್ಳಿಕೊಂಡು ಮುಂದಕ್ಕೆ ಬರಲು ಪ್ರಯತ್ನಿಸುವ ವ್ಯಕ್ತಿ ನಂತ್ರ ಪ್ಲಾಟ್ ಫಾರ್ಮ್ ನಲ್ಲಿ ಬೀಳೋದನ್ನು ವಿಡಿಯೋದಲ್ಲಿ ನೋಡ್ಬಹುದು. ಆಗಸ್ಟ್ 5 ರಂದು ಹಂಚಿಕೊಳ್ಳಲಾದ ವೀಡಿಯೊ ಸುಮಾರು 1 ಮಿಲಿಯನ್ ಗಿಂತಲೂ ಹೆಚ್ಚು ವೀಕ್ಷಣೆ ಪಡೆದಿದೆ. ಸುಮಾರು 225 ಕಾಮೆಂಟ್ ಬಂದಿದೆ.
ನೀವು ಅಲ್ಲಿ ನಿಂತ್ರೆ ಸಾಕು, ನೀವು ಸ್ವಯಂಚಾಲಿತವಾಗಿ ನಿಮ್ಮ ಗಮ್ಯಸ್ಥಾನವನ್ನು ತಲುಪುತ್ತೀರಿ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ನೀವು ಮುಂಬೈಗೆ ಭೇಟಿ ನೀಡಿದರೆ, ಪ್ರತಿ ಸ್ಥಳೀಯ ರೈಲಿನಲ್ಲೂ ಇದನ್ನು ನೋಡ್ಬಹುದು ಎಂದು ಇನ್ನೊಬ್ಬರು ಬರೆದಿದ್ದಾರೆ.