ಸಾಲ ಮರುಪಾವತಿ ಮಾಡದ ಮಹಿಳೆಯ ಮಾರ್ಫ್ ಪೋರ್ನ್ ವಿಡಿಯೋ ಕಳಿಸಿದ ಸಾಲ ವಸೂಲಾತಿ ಏಜೆಂಟ್ ಪೊಲೀಸರ ಅತಿಥಿಯಾದ ಘಟನೆ ನಡೆದಿದೆ.
9,000 ರೂಪಾಯಿ ಸಾಲ ಮರುಪಾವತಿಸಲು ವಿಫಲವಾದ ಕಾರಣ ಮಹಿಳೆಯೊಬ್ಬರ ಅಶ್ಲೀಲ ವೀಡಿಯೊಗಳನ್ನು ತನ್ನ ದೂರದ ಸಂಬಂಧಿಗೆ ಕಳುಹಿಸಿದ ಆರೋಪದ ಮೇಲೆ ಕರ್ನಾಟಕದ 19 ವರ್ಷದ ಸಾಲ ವಸೂಲಾತಿ ಏಜೆಂಟ್‌ನನ್ನು ಮುಂಬೈನ ಅಂಧೇರಿ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಕರ್ನಾಟಕದಲ್ಲಿ ಬಂಧಿಸಿದ ನಂತರ ಸೋಮವಾರ ಮುಂಬೈಗೆ ಕರೆತರಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾವು ಆತನನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನಾಲ್ಕು ದಿನ ಕಸ್ಟಡಿಗೆ ಪಡೆದಿದ್ದೇವೆ ಎಂದು ಅಂಧೇರಿ ಜಿಆರ್‌ಪಿಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಹೇಳಿದ್ದಾರೆ.
ನಮಾಜ್ ಸಲ್ಲಿಸುತ್ತಿರುವ ಭಾರತೀಯ ಸೇನಾಧಿಕಾರಿಗಳ ಫೋಟೋ ವೈರಲ್
ವಾಟ್ಸಾಪ್‌ನಲ್ಲಿ ಅಪರಿಚಿತ ಸಂಖ್ಯೆಯಿಂದ ಅಶ್ಲೀಲ ವೀಡಿಯೊ ಸ್ವೀಕರಿಸಿದ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಮಾರ್ಚ್ 4 ರಂದು ಎಫ್‌ಐಆರ್ ದಾಖಲಿಸಲಾಗಿದೆ.
ಮಹಿಳೆಯ ದೂರದ ಸಂಬಂಧಿಯ ಮುಖವನ್ನು ವಿಡಿಯೋಗಳಲ್ಲಿ ಮಾರ್ಫ್ ಮಾಡಲಾಗಿದೆ. ಸಾಲ ಪಡೆದ ಮಹಿಳೆಗೆ ಸಾಲ ತೀರಿಸಲು ಸಾಧ್ಯವಾಗದೆ ಈಗ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂದು ವಿಡಿಯೋ ಕಳುಹಿಸಿದವರು ಸಂದೇಶ ರವಾನಿಸಿದ್ದರು.
ಸಾಲ ವಸೂಲಾತಿ ಏಜೆಂಟ್ ಹರ್ಷ ಕಂಪನಿಯು ನೀಡಿದ ಸಾಲದ ಮೇಲೆ 10 ಪ್ರತಿಶತ ಕಮಿಷನ್ ಪಡೆಯುತ್ತಿದ್ದುದಲ್ಲದೆ ಸುಸ್ತಿದಾರರ ವೈಯಕ್ತಿಕ ಡೇಟಾವನ್ನು ದುರ್ಬಳಕೆ ಮಾಡಿಕೊಂಡಿದ್ದ.
ಸಾಲದ ಸೈಬರ್ ವಂಚನೆ ಹೇಗೆ ?
ಸೈಬರ್ ವಂಚಕರು ಅಲ್ಪಾವಧಿಯ ಆನ್‌ಲೈನ್ ಸಾಲ ವಂಚನೆ ನಡೆಸುತ್ತಿದ್ದಾರೆ. ಕೆಲವು ಸಾವಿರ ರೂಪಾಯಿಗಳ ಸಣ್ಣ ಸಾಲವನ್ನು ಪಡೆಯಲು ಜನರಿಗೆ ಆಮಿಷವೊಡ್ಡುತ್ತಾರೆ.
ಇದಕ್ಕಾಗಿ ಅವರು ತಮ್ಮ ಮೊಬೈಲ್ ಫೋನ್‌ನಲ್ಲಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ಮತ್ತು ಅವರ ಕಾಂಟ್ಯಾಕ್ಟ್ ಲಿಸ್ಟ್, ವಿಡಿಯೊಗಳು, ಫೋಟೋಗಳು ಮತ್ತು ಸಂದೇಶಗಳಿಗೆ ಕಡ್ಡಾಯ ಪ್ರವೇಶವನ್ನು ಒದಗಿಸುವಂತೆ ಮಾಡಲಾಗುತ್ತದೆ.
ಸಾಲ ಪಾವತಿಸಿದ ನಂತರವೂ, ವಂಚಕರು ಗ್ರಾಹಕರ ವೈಯಕ್ತಿಕ ಮಾಹಿತಿ ಬಳಸಿಕೊಂಡು ಸುಲಿಗೆ ಮಾಡುತ್ತಾರೆ, ಅಂತಹ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳದಂತೆ ಪೊಲೀಸರು ಜನರಿಗೆ ಎಚ್ಚರಿಕೆ ನೀಡಿದ್ದಾರೆ.