ಮುಂಬೈ: ಅಮರಾವತಿ ಸಂಸದೆ ನವನೀತ್ ರಾಣಾ ಅವರ ಎಂಆರ್ ಐ ಸ್ಕ್ಯಾನ್ ನಡೆಯುತ್ತಿದ್ದ ವೇಳೆ ಅವರ ಫೋಟೋ ಕ್ಲಿಕ್ಕಿಸಿದ ಅಪರಿಚಿತ ವ್ಯಕ್ತಿಯ ಮೇಲೆ ಮುಂಬೈ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಹನುಮಾನ್ ಚಾಲೀಸಾ ವಿವಾದ ಸಂಬಂಧ ಜೈಲುಪಾಲಾಗಿದ್ದ ನವನೀತ್ ರಾಣಾ ಅವರು ಜಾಮೀನಿನ ಆಧಾರದ ಮೇಲೆ ಬಿಡುಗಡೆಯಾಗಿ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆಗೆ ಒಳಪಟ್ಟಿದ್ದರು. ಆಗ ಅವರಿಗೆ MRI ಸ್ಕ್ಯಾನ್ ನಡೆದಿತ್ತು. ಆಗ ಫೋಟೋಗಳನ್ನು ಕ್ಲಿಕ್ಕಿಸಲಾಗಿದೆ.
BIG NEWS: ಸಹಾಯಕ ಪ್ರಾಧ್ಯಾಪಕ ನೇಮಕಾತಿಯಲ್ಲಿ ಅಕ್ರಮ; ಇಂಗ್ಲೀಷ್ ವಿಭಾಗದ ಪ್ರಾಧ್ಯಾಪಕಿ ಶ್ರೀದೇವಿ ವಜಾ
ಈ ಸಂಬಂಧ ಬಾಂದ್ರಾದ ಲೀಲಾವತಿ ಆಸ್ಪತ್ರೆಯ ಭದ್ರತಾ ಅಧಿಕಾರಿಗಳು ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆಸ್ಪತ್ರೆಯ MRI ಸ್ಕ್ಯಾನಿಂಗ್ ವಿಭಾಗದೊಳಗೆ ಮೊಬೈಲ್ ಹಾಗೂ ಇನ್ನಿತರ ಎಲೆಕ್ಟ್ರಾನಿಕ್ ಸಾಧನಗಳ ಮೇಲೆ ನಿಷೇಧ ಹೇರಲಾಗಿದೆ.
ಆದರೆ MRI ಸ್ಕ್ಯಾನಿಂಗ್ ವಿಭಾಗಕ್ಕೆ ಬಂದ ಅಪರಿಚಿತ ವ್ಯಕ್ತಿ ಫೋಟೋಗಳನ್ನು ತೆಗೆದಿದ್ದಾನೆ ಎಂದು ದೂರು ನೀಡಿರುವುದಾಗಿ ತಿಳಿಸಿದ್ದಾರೆ. ದೂರಿನನ್ವಯ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 448 (ಅತಿಕ್ರಮಣ) ಅಡಿಯಲ್ಲಿ ಆ ವ್ಯಕ್ತಿಯ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೇಳಿದರು.
ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸ್ಥಳೀಯ ಶಿವಸೇನೆ ಮುಖಂಡರು MRI ಸ್ಕ್ಯಾನ್ ವಿಭಾಗದಲ್ಲಿ ಫೋಟೋ ತೆಗೆದಿರುವುದನ್ನು ವಿರೋಧಿಸಿದ್ದರು.