ಟ್ವಿಟ್ಟರ್ ಸಂಸ್ಥೆಯನ್ನು ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ವಶಪಡಿಸಿಕೊಂಡ ಬಳಿಕ ಹಲವಾರು ಬದಲಾವಣೆಗಳನ್ನು ಮಾಡಿದ್ದು, ಈ ಪೈಕಿ ಹಣ ಪಾವತಿಸುವವರಿಗೆ ಬ್ಲೂ ಟಿಕ್ ಸೇರಿದಂತೆ ಬೇರೆ ಬೇರೆ ಬಣ್ಣದ ಗುರುತು ನೀಡುವುದೂ ಸಹ ಒಂದಾಗಿದೆ.
ಇದೀಗ ಮುಂಬೈ ಮೂಲದ ಪತ್ರಕರ್ತರೊಬ್ಬರು ಈ ಐಡಿಯಾ ತಮ್ಮದಾಗಿದ್ದು, 2022 ರ ಮೇ ತಿಂಗಳಿನಲ್ಲಿ ನಾನು ಈ ಕುರಿತಂತೆ ಎಲಾನ್ ಮಸ್ಕ್ ಅವರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದೆ. ಇದಕ್ಕೆ ಯಾವುದೇ ಉತ್ತರ ನೀಡದ ಅವರು ಬಳಿಕ ಜಾರಿಗೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಹೀಗಾಗಿ ಎಲಾನ್ ಮಸ್ಕ್ ವಿರುದ್ಧ ಕೃತಿಚೌರ್ಯ ಸೇರಿದಂತೆ ಹಲವು ಸೆಕ್ಷನ್ ಗಳ ಅಡಿ ಮುಂಬೈನ ಅಂಧೇರಿ ಮ್ಯಾಜಿಸ್ಟ್ರೇಟ್ ಕೋರ್ಟಿಗೆ ದೂರು ದಾಖಲಿಸಿರುವ ಪತ್ರಕರ್ತ ರೂಪೇಶ್ ಸಿಂಗ್, ನನಗೆ ಯಾವುದೇ ಸಂಭಾವನೆ ನೀಡದೆ ನನ್ನ ಐಡಿಯಾವನ್ನು ಕದಿಯಲಾಗಿದೆ ಎಂದು ಹೇಳಿದ್ದಾರೆ.