
ಐಪಿಎಲ್ ನ ಎಲ್ಲಾ ಪಂದ್ಯಗಳು ಒಂದಕ್ಕಿಂತ ಒಂದು ರೋಚಕತೆಯಿಂದ ಸಾಗುತ್ತಿದ್ದು ಕ್ರಿಕೆಟ್ ಪ್ರೇಮಿಗಳು ಪ್ರತಿಯೊಂದು ಪಂದ್ಯವನ್ನು ಮಿಸ್ ಮಾಡದೆ ವೀಕ್ಷಿಸುತ್ತಿದ್ದಾರೆ, ನಿನ್ನೆಯ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಜಾಸ್ ಬಟ್ಲರ್ ಅಬ್ಬರಕ್ಕೆ ಆರ್ಸಿಬಿ ತತ್ತರಿಸಿ ಹೋಗಿದೆ. ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡ ಆರು ವಿಕೆಟ್ ಗಳಿಂದ ಭರ್ಜರಿ ಜಯ ಸಾಧಿಸಿದೆ.
ಇಂದು ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಮುಖಿಯಾಗಲಿದ್ದು, ಹ್ಯಾಟ್ರಿಕ್ ಸೋಲು ಕಂಡಿರುವ ಮುಂಬೈ ಇಂಡಿಯನ್ಸ್ ತನ್ನ ಮೊದಲ ಜಯದ ನಿರೀಕ್ಷೆಯಲ್ಲಿದೆ. ಮೂರು ಪಂದ್ಯಗಳಲ್ಲೂ ಆಲಭ್ಯರಾಗಿದ್ದ ಸೂರ್ಯಕುಮಾರ್ ಯಾದವ್ ಇಂದು ತಂಡಕ್ಕೆ ಸೇರ್ಪಡೆಯಾಗಲಿದ್ದು, ಮುಂಬೈ ಇಂಡಿಯನ್ಸ್ ತಂಡ ತನ್ನ ಹೋಂ ಗ್ರೌಂಡಲ್ಲಿ ಮೊದಲ ಜಯ ಸಾಧಿಸಲಿದೆಯಾ ಕಾದು ನೋಡಬೇಕಾಗಿದೆ.