
ದೌರ್ಜನ್ಯಕ್ಕೊಳಗಾದ ವ್ಯಕ್ತಿ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಮಹಿಳೆ ವ್ಯಕ್ತಿಯ ಮೇಲೆ ದೌರ್ಜನ್ಯ ಎಸಗುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ವೀಡಿಯೊ ಪ್ರಕಾರ ಇಬ್ಬರು ವ್ಯಕ್ತಿಗಳು ಮಹಿಳೆಯನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ.
ಮುಂಬೈ ರಸ್ತೆಗಳಲ್ಲಿ ಅಕ್ರಮ ಬೀದಿ ಬದಿ ವ್ಯಾಪಾರಿಗಳು ಅತಿಕ್ರಮಣ ಮಾಡುವ ಮೂಲಕ ಸಾರ್ವಜನಿಕರಿಗೆ ಅನಾನುಕೂಲತೆಯನ್ನು ಉಂಟುಮಾಡುವ ವಿಷಯವನ್ನು ವೀಡಿಯೊ ಎತ್ತಿ ತೋರಿಸಿದೆ.
ಘಟನೆಯ ವೀಡಿಯೋವನ್ನು ಹಂಚಿಕೊಂಡ ನೆಟ್ಟಿಗರೊಬ್ಬರು “ರಸ್ತೆಯಲ್ಲಿ ಅತಿಕ್ರಮಣ. ಇಂದು ಅಕ್ರಮವಾಗಿ ವ್ಯಾಪಾರ ಮಾಡುವ ಮಹಿಳೆಯೊಬ್ಬರು ಕೊಲ್ಲಲು ಚಾಕುವನ್ನು ಹೊರತೆಗೆದು ವ್ಯಕ್ತಿಯ ಮೇಲೆ ದಾಳಿ ಮಾಡಲು ಹೊರಟಿದ್ದಳು.” ಎಂದು ಪೋಸ್ಟ್ ಮಾಡಿ ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಮತ್ತು ಮುಂಬೈ ಪೊಲೀಸರ ಅಧಿಕೃತ ಹ್ಯಾಂಡಲ್‌ಗಳನ್ನು ಟ್ಯಾಗ್ ಮಾಡಿ ಈ ಪ್ರದೇಶದಿಂದ ಅಕ್ರಮ ಬೀದಿ ಬದಿ ವ್ಯಾಪಾರಿಗಳನ್ನು ಹೊರಹಾಕುವಂತೆ ಒತ್ತಾಯಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಮುಂಬೈ ಪೊಲೀಸರು ಮುಂದಿನ ಕ್ರಮಕ್ಕಾಗಿ ಘಟನೆಯ ಬಗ್ಗೆ ಎಂಐಡಿಸಿ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ ಅಕ್ರಮ ವ್ಯಾಪಾರಿಗಳ ವಿರುದ್ಧದ ಕಾರ್ಯಾಚರಣೆಯಲ್ಲಿ BMC ಅಂಧೇರಿ ಪಶ್ಚಿಮದಲ್ಲಿ 14 ಸ್ಥಳಗಳನ್ನು ತೆರವುಗೊಳಿಸಿತು. ಈ ಪ್ರದೇಶಗಳಲ್ಲಿ ಎಸ್‌ವಿ ರಸ್ತೆ, ಅಂಧೇರಿ ನಿಲ್ದಾಣ ಪ್ರದೇಶ, ಸಿಡಿ ಬರ್ಫಿವಾಲಾ ರಸ್ತೆ ಮತ್ತು ಎನ್ ದತ್ತ ಅಪ್ರೋಚ್ ರಸ್ತೆ ಸೇರಿವೆ.