
ಸಾಮಾನ್ಯವಾಗಿ ಹಸಿವೆ ಆದಾಗ, ಹೋಟೆಲ್ ರೆಸ್ಟೊರೆಂಟ್ ಹುಡುಕ್ಕೊಂಡು ಹೋಗೋದಕ್ಕೆ ಬೇಸರವಾದಾಗ ಮನೆಯಲ್ಲೇ ಕೂತು ಆರ್ಡರ್ ಮಾಡ್ತಾರೆ. ಮುಂಬೈನ ಯುವತಿಯೊಬ್ಬಳು ಕೂಡಾ ಆನ್‌ಲೈನ್‌ನಲ್ಲಿ ಬಿರಿಯಾನಿ ಆರ್ಡರ್ ಮಾಡಿದ್ದಾಳೆ. ಹಾಗೆ ಆರ್ಡರ್ ಮಾಡುವ ಮುಂಚೆ ಆಕೆ ಕಂಠಪೂರ್ತಿ ಕುಡಿದಿದ್ದಾಳೆ. ಅದೇ ಅಮಲೇರಿದ ಸ್ಥಿತಿಯಲ್ಲೇ ಆಕೆಗೆ, ಆರ್ಡರ್ ಮಾಡ್ತಿರೋದು ಅಷ್ಟೆ ಗೊತ್ತು. ಕಣ್ಣು ಮಂಜು ಮಂಜಾಗಿದ್ದಾಗಲೇ ಆಕೆ ಆರ್ಡರ್ ಮಾಡೋದಕ್ಕಂತ ಹೋಟೆಲ್ ಸೆಲೆಕ್ಟ್ ಮಾಡಿಕೊಂಡಿದ್ದು ಮಾತ್ರ ದೂರದ ಬೆಂಗಳೂರಿನ ಮೇಘನಾ ಫುಡ್ ಹೋಟೆಲ್‌ನಿಂದ. ಅಷ್ಟಕ್ಕೂ ಆಕೆ ಈ ಬಿರಿಯಾನಿಗೆ ಕೊಟ್ಟ ದುಡ್ಡು ಎಷ್ಟು ಗೊತ್ತಾ ಬರೋಬ್ಬರಿ 2500 ರೂಪಾಯಿ.
ಎಣ್ಣೆ ಎಫೆಕ್ಟ್ ಕಡಿಮೆ ಆಗ್ತಿದ್ದ ಹಾಗೆಯೇ ಆಕೆ, ಆರ್ಡರ್ ಸ್ಟೇಟಸ್ ಚೆಕ್ ಮಾಡಿದ್ದಾಳೆ. ಆಗ ಆಕೆಗೆ ತಾನು ಮಾಡಿದ್ದ ಎಡವಟ್ಟು ಏನು ಅನ್ನೋದು ಗೊತ್ತಾಗಿದೆ. ಆ ನಂತರ ಆಕೆ, ಅದರ ಸ್ಕ್ರೀನ್ ಶಾಟ್ ತೆಗೆದು ಅದನ್ನು ಟ್ವಿಟರ್‌ನಲ್ಲಿ ಶೇರ್ ಮಾಡ್ಕೊಂಡಿದ್ದಾಳೆ. ಅದಕ್ಕೆ ಕ್ಯಾಪ್ಟನ್‌ನಲ್ಲಿ “ನಾನು ಬೆಂಗಳೂರಿನಿಂದ 2,500 ರೂಪಾಯಿ ಮೌಲ್ಯದ ಬಿರಿಯಾನಿಯನ್ನು ಆರ್ಡರ್ ಮಾಡಿದ್ದೇನೆಯೇ ? ಎಂದು ಬರೆದುಕೊಂಡಿದ್ದಾಳೆ
ಸದ್ಯಕ್ಕೆ ಈ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದನ್ನ 492.8k ಗಿಂತಲೂ ಹೆಚ್ಚು ಜನರು ನೋಡಿದ್ದಾರೆ. ನೆಟ್ಟಿಗರು ಈ ಪೋಸ್ಟ್ ನೋಡಿ ಎಂಜಾಯ್ ಮಾಡಿದ್ದು, ಇದಕ್ಕೆ ಇನ್ನಷ್ಟು ಫನ್ನಿ ಫನ್ನಿಯಾಗಿರೋ ಕಾಮೆಂಟ್ ಪೋಸ್ಟ್ ಮಾಡುತ್ತಿದ್ದಾರೆ.