ಕೋವಿಡ್ ಲಸಿಕೆಗೆ ತೀವ್ರಗತಿ ಕೊಡುತ್ತಿರುವ ಮುಂಬೈ ಜಿಲ್ಲಾಡಳಿತವು ಒಂದು ಕೊಟಿ ಲಸಿಕೆಗಳನ್ನು ದಾಖಲಿಸಿದ ದೇಶದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೋರೇಷನ್ (ಬಿಎಂಸಿ) ತಿಳಿಸಿದೆ.
ಇದುವರೆಗೂ ಜಿಲ್ಲೆಯಲ್ಲಿ 1,00,60,411 ಲಸಿಕೆಗಳನ್ನು ಹಾಕಲಾಗಿದೆ ಎಂದು ಕೋವಿನ್ ಪೋರ್ಟಲ್ ಮಾಹಿತಿಯಿಂದ ತಿಳಿದುಬಂದಿದೆ. ಇವರ ಪೈಕಿ 73,05,020 ಮಂದಿ ಮೊದಲ ಡೋಸ್ ಪಡೆದಿದ್ದು, 29,29,128 ಮಂದಿ ಎರಡೂ ಚುಚ್ಚುಮದ್ದುಗಳನ್ನು ಪಡೆದಿದ್ದಾರೆ. ಶನಿವಾರ ಒಂದೇ ದಿನ 1,75,254 ಲಸಿಕೆಗಳನ್ನು ಮುಂಬೈಯಲ್ಲಿ ದಾಖಲಿಸಲಾಗಿದೆ.
ಲಸಿಕೆ ನಂತ್ರವೂ ಪ್ರತಿಕಾಯ ಉತ್ಪತ್ತಿಯಾಗಿಲ್ಲವೆಂದ್ರೆ ಏನು ಮಾಡ್ಬೇಕು…..?
ಶುಕ್ರವಾರದಂದು ಮುಂಬೈಯಲ್ಲಿ 422 ಮಂದಿಗೆ ಕೋವಿಡ್-19 ಸೋಂಕು ತಗುಲಿರುವ ದಾಖಲಾಗಿದೆ. ಇದೇ ದಿನದಂದು 303 ಮಂದಿ ಚೇತರಿಸಿಕೊಂಡಿದ್ದಾರೆ. ಸತತ ಮೂರನೇ ದಿನದಂದು ಮಾಯಾನಗರಿಯಲ್ಲಿ ಕೋವಿಡ್-19 ಪಾಸಿಟಿವ್ ಸಂಖ್ಯೆಯು 400 ದಾಟಿದೆ.