
ಮುಂಬೈ: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ವಾಸವಿರುವ ಬಾಂದ್ರಾ ವೆಸ್ಟ್ ನ ಪಾಲಿ ಹಿಲ್ ನಲ್ಲಿರುವ ನವ್ರೋಜ್ ಅಪಾರ್ಟ್ ಮೆಂಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಘಟನೆ ಬಗ್ಗೆ ಮಾಹಿತಿ ಬಂದ ಕೂಡಲೇ ತ್ವರಿತವಾಗಿ ಸ್ಪಂದಿಸಿದ ನಾಲ್ಕು ಅಗ್ನಿಶಾಮಕ ವಾಹನಗಳು, ಮೂರು ಜಂಬೋ ಟ್ಯಾಂಕರ್‌ಗಳು ಮತ್ತು ಒಂದು ಉಸಿರಾಟದ ಉಪಕರಣ ವ್ಯಾನ್ ಅನ್ನು 17 ಅಂತಸ್ತಿನ ಬಹುಮಹಡಿ ಕಟ್ಟಡಕ್ಕೆ ರವಾನಿಸಲಾಗಿದೆ.
ಅದೃಷ್ಟವಶಾತ್ ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿ, ಗಾಯಗೊಂಡ ವರದಿಯಾಗಿಲ್ಲ. ಕಟ್ಟಡದ 13ನೇ ಮಹಡಿಯಲ್ಲಿರುವ ಅಡುಗೆ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ನರ್ಗಿಸ್ ದತ್ ರಸ್ತೆಯಲ್ಲಿರುವ ವಸತಿ ಕಟ್ಟಡದಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಜಾಕ್ವೆಲಿನ್ ಫರ್ನಾಂಡಿಸ್ ಅವರ ನಿವಾಸವು ಐಷಾರಾಮಿ 5 BHK ಘಟಕವಾಗಿದೆ.
ಜಾಕ್ವೆಲಿನ್ ಫರ್ನಾಂಡೀಸ್ ಅವರು 2023 ರಲ್ಲಿ ಮುಂಬೈನ ಬಾಂದ್ರಾ ವೆಸ್ಟ್ ನಲ್ಲಿರುವ ಪಾಲಿ ಹಿಲ್‌ನ ದುಬಾರಿ ನೆರೆಹೊರೆಯಲ್ಲಿ ಈ ಅದ್ದೂರಿ ನಿವಾಸ ಖರೀದಿಸಿದ್ದಾರೆ. ಕಳೆದ ವರ್ಷ ಜುಲೈನಲ್ಲಿ ಅವರ ಹೊಸ ಮನೆಯ ಹೊರಭಾಗವನ್ನು ಪ್ರದರ್ಶಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಕಟ್ಟಡವು ದಿ ಸೂಟ್ಸ್, ದಿ ಪೆಂಟ್‌ಹೌಸ್, ಸ್ಕೈ ವಿಲ್ಲಾ ಮತ್ತು ಮ್ಯಾನ್ಷನ್‌ನಂತಹ ವಿವಿಧ ವಸತಿ ಆಯ್ಕೆಗಳನ್ನು ನೀಡುತ್ತದೆ.