alex Certify ಯುವಕನ ಮೂತ್ರಕೋಶದಲ್ಲಿತ್ತು ತೆಂಗಿನಕಾಯಿ ಗಾತ್ರದ ಕಲ್ಲು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುವಕನ ಮೂತ್ರಕೋಶದಲ್ಲಿತ್ತು ತೆಂಗಿನಕಾಯಿ ಗಾತ್ರದ ಕಲ್ಲು…!

ಕೋಲ್ಕತ್ತಾ ಮೂಲದ 17 ವರ್ಷ ಯುವಕನ ಮೂತ್ರಕೋಶದಿಂದ ತೆಂಗಿನ ಕಾಯಿ ಗಾತ್ರದ 1 ಕೆಜಿ ತೂಕದ ಕಲ್ಲನ್ನು ತೆಗೆಯುವಲ್ಲಿ ಮುಂಬೈನ ವೈದ್ಯರು ಯಶಸ್ವಿಯಾಗಿದ್ದಾರೆ. ಈ ಯುವಕ ಅನಾಥನಾದ ಕಾರಣ ಮುಂಬೈ ವೈದ್ಯರು ಉಚಿತವಾಗಿ ಈ ಚಿಕಿತ್ಸೆಯನ್ನ ನಡೆಸಿದ್ದಾರೆ.

ರೂಬೆನ್​ ಶೇಖಾ ಜನ್ಮತಃ ತೆರೆದ ಮೂತ್ರಕೋಶ ಹಾಗೂ ದೋಷಪೂರಿತ ಶಿಶ್ನವನ್ನ ಹೊಂದಿದ್ದ. ಇದರಿಂದಾಗಿ ಆತನ ಮೂತ್ರ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಇದನ್ನ ಎಕ್ಸ್ಟ್ರೋಫಿ ಎಪಿಸ್ಪಡೈಸ್​​ ಕಾಂಪ್ಲೆಕ್ಸ್​ ಎಂದು ಕರೆಯುತ್ತಾರೆ. ಈ ಕಾಯಿಲೆಯು ಪ್ರತಿ 1 ಲಕ್ಷ ಮಗುವಿನಲ್ಲಿ ಒಂದು ಶಿಶುವಿಗೆ ಮಾತ್ರ ಇರುತ್ತದೆ.

ಇಂತಹದ್ದೊಂದು ಭಯಾನಕ ಹಾಗೂ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದ ರೂಬೆನ್​ಗೆ ವೈದ್ಯ ರಾಜೀವ್​ ರೆಡ್ಕರ್​ ಮರುಜನ್ಮ ನೀಡಿದ್ದಾರೆ. ರೂಬೆನ್​ಗೆ 15 ವರ್ಷಗಳ ಹಿಂದೆ ರಾಜೀವ್​ ಚಿಕಿತ್ಸೆ ನೀಡಿದ್ದರು. ರೂಬೆನ್​ಗೆ ಮೂತ್ರ ವ್ಯವಸ್ಥೆ ಸರಿಯಾಗಿ ಆಗುವ ಸಲುವಾಗಿ ಕೆಲ ಚಿಕಿತ್ಸೆಗಳನ್ನ ನೀಡಿದ್ರು. ಈ ಚಿಕಿತ್ಸೆ ಬಳಿಕ ಕೋಲ್ಕತ್ತಾಗೆ ತೆರಳಿದ್ದ ರೂಬೆನ್​ ಮತ್ತೆಂದೂ ವೈದ್ಯರನ್ನ ಭೇಟಿಯಾಗಿರಲಿಲ್ಲ.

ಇದೀಗ ಮೂತ್ರ ವ್ಯವಸ್ಥೆಯಲ್ಲಿ ಅತಿಯಾದ ಸಮಸ್ಯೆ ಅನುಭವಿಸುತ್ತಿದ್ದ ರೂಬೆನ್​ ಕಳೆದ ತಿಂಗಳು ಮತ್ತೆ ಡಾ. ರಾಜೀವ್​ರನ್ನ ಸಂಪರ್ಕಿಸಿದ್ದಾನೆ. ಕೂಡಲೇ ಮುಂಬೈಗೆ ರೂಬೆನ್​ನ್ನ ಕರೆಸಿಕೊಂಡ ಡಾ. ರಾಜೀವ್​ ಹಾಗೂ ತಂಡ ಆತನ ಮೂತ್ರಕೋಶದಲ್ಲಿದ್ದ 13.4 ಇಂಚು ಗಾತ್ರದ ಕಲ್ಲನ್ನು ತೆಗೆದುಹಾಕಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...