ಬೈಕುಲ್ಲಾ ರೈಲ್ವೇ ನಿಲ್ದಾಣದಲ್ಲಿ ಸರಗಳ್ಳತನ ಮಾಡಿದ ಅಪರಾಧಿಗೆ ನೀಡಲಾಗಿದ್ದ ಮೂರು ತಿಂಗಳ ಜೈಲು ಶಿಕ್ಷೆಯನ್ನು ಸೆಷನ್ಸ್ ನ್ಯಾಯಾಲಯವು ರದ್ದುಗೊಳಿಸಿದೆ, ಇದು ಅವನ ಮೊದಲ ಅಪರಾಧವಾಗಿದೆ ಮತ್ತು ಪ್ರತಿಯೊಬ್ಬರೂ ಸುಧಾರಿಸಲು ಮತ್ತು ಉತ್ತಮ ನಾಗರಿಕರಾಗಲು ಅವಕಾಶವನ್ನು ನೀಡಬೇಕಾಗಿದೆ ಎಂದು ಕೋರ್ಟ್ ಹೇಳಿದೆ.
35 ವರ್ಷದ ವಾಸಿಂ ಖುರೇಷಿ ಎಂಬಾತ 2019ರ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶದ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದ. ಸರಗಳ್ಳತನದ ಆರೋಪದ ಮೇಲೆ ವಿಧಿಸಲಾಗಿದ್ದ ಶಿಕ್ಷೆಯನ್ನು ಈತ ಪ್ರಶ್ನಿಸಿದ್ದ. ಅದರ ವಿಚಾರಣೆ ನಡೆಸಿದ ಕೋರ್ಟ್, ಮೊದಲ ಬಾರಿಗೆ ಈತ ಕಳ್ಳತನ ಮಾಡಿದ್ದಾನೆ. ಇಂಥ ಅಪರಾಧಿಗಳನ್ನು ಕೆಲವೊಮ್ಮೆ ಶಿಕ್ಷೆಗೆ ಬದಲು ತಿದ್ದಿಕೊಳ್ಳಲು ಬಿಡಬೇಕು ಎಂದು ಹೇಳುವ ಮೂಲಕ ಬಿಡುಗಡೆ ಮಾಡಿದ್ದಾರೆ.
ಈತ ತನ್ನ ತಂದೆ-ತಾಯಿ, ಸಹೋದರಿ, ಪತ್ನಿ ಹಾಗೂ ಐವರು ಮಕ್ಕಳೊಂದಿಗೆ ವಾಸವಾಗಿದ್ದು, ಜೀವನೋಪಾಯಕ್ಕಾಗಿ ಕುರಿ ಮಾಂಸದ ಅಂಗಡಿ ನಡೆಸುತ್ತಿದ್ದಾನೆ. ಆತನ ಪ್ರದೇಶದ ವ್ಯಕ್ತಿಗಳು ಆತನ ಬಗ್ಗೆ ಉತ್ತಮ ಅಭಿಪ್ರಾಯವನ್ನು ಹೊಂದಿದ್ದಾರೆ ಮತ್ತು ಅವನ ಕೃತ್ಯದಿಂದ ಅವರ ಕುಟುಂಬವೂ ಅಸಮಾಧಾನಗೊಂಡಿದೆ ಎಂಬ ವಕೀಲರ ವಾದವನ್ನು ಮಾನ್ಯ ಮಾಡಿದ ಸೆಷನ್ಸ್ ನ್ಯಾಯಾಧೀಶ ಬಿ.ಡಿ. ಶೆಲ್ಕೆ ಅವರು ಆತನನ್ನು ಬಿಡುಗಡೆ ಮಾಡಿದ್ದಾರೆ.