ತನ್ನ ಆದಾಯಕ್ಕಿಂತ 1500% ಹೆಚ್ಚು ಆಸ್ತಿ ಗಳಿಸಿದ್ದಾರೆಂದು ಪೊಲೀಸ್ ಪೇದೆ ಹಾಗೂ ಆತನ ಪತ್ನಿ ವಿರುದ್ಧ, ಮುಂಬೈನ ಭ್ರಷ್ಟಾಚಾರ ನಿಗ್ರಹ ದಳವು ಪ್ರಕರಣ ದಾಖಲಿಸಿದೆ. ಇಬ್ಬರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ 1988ರ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ದಂಪತಿಯು ಬರೋಬ್ಬರಿ 12.65 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಕಾನ್ಸ್ಟೇಬಲ್ ಸುರೇಶ್ ಬಾಮ್ನೆ ಮತ್ತು ಅವರ ಪತ್ನಿ ಲತಾ ಸುರೇಶ್ ಬಾಮ್ನೆ ವಿರುದ್ಧ ಮೂರು ವರ್ಷಗಳ ಹಿಂದೆ ಭ್ರಷ್ಟಾಚಾರದ ಆರೋಪದ ಮೇಲೆ ದೂರು ದಾಖಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮದುವೆ ವೇಳೆಯೇ ಕೋಪಗೊಂಡ ಜೋಡಿ; ಶಾಸ್ತ್ರದ ವೇಳೆ ಕಿತ್ತಾಡಿಕೊಂಡ ವಧು-ವರ..!
ಖತರ್ನಾಕ್ ದಂಪತಿಯು ವಸತಿ ಯೋಜನೆಯಿಂದ ಭಾರಿ ಮೊತ್ತದ ಹಣವನ್ನು ಕಬಳಿಸಿ ಫ್ಲಾಟ್ಗಳು, ಜಮೀನು, ಸೈಟ್ ಸೇರಿದಂತೆ ಮುಂತಾದ ಆಸ್ತಿಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೂರು ದಾಖಲಾದ ತಕ್ಷಣ ಆ ಸಮಯದಲ್ಲಿ ಭಯೋತ್ಪಾದನಾ ನಿಗ್ರಹ ದಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಾಮ್ನೆಯನ್ನು, ನೈಗಾಂವ್ನ ಸ್ಥಳೀಯ ಶಸ್ತ್ರಾಸ್ತ್ರ ವಿಭಾಗಕ್ಕೆ ವರ್ಗಾಯಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.