alex Certify BIG NEWS: ಕೋವಿಡ್ ಲಸಿಕೆಯ 3 ಡೋಸ್ ಪಡೆದಿದ್ದ ಮುಂಬೈ ವ್ಯಕ್ತಿಗೆ ಒಮಿಕ್ರಾನ್ ಸೋಂಕು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೋವಿಡ್ ಲಸಿಕೆಯ 3 ಡೋಸ್ ಪಡೆದಿದ್ದ ಮುಂಬೈ ವ್ಯಕ್ತಿಗೆ ಒಮಿಕ್ರಾನ್ ಸೋಂಕು

ನ್ಯೂಯಾರ್ಕ್‌ನಿಂದ ಮುಂಬಯಿಗೆ ಆಗಮಿಸಿರುವ 29-ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಒಮಿಕ್ರಾನ್ ಪಾಸಿಟಿವ್ ಕಂಡುಬಂದಿದ್ದಾರೆ ಎಂದು ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ತಿಳಿಸಿದೆ.

ಕೊರೋನಾ ವೈರಸ್‌ಗೆ ಫೈಜ಼ರ್‌ನ ಮೂರು ಡೋಸ್ ಲಸಿಕೆಗಳನ್ನು ತೆಗೆದುಕೊಂಡಿದ್ದ ಈತನಿಗೆ ರೋಗದ ಯಾವುದೇ ಲಕ್ಷಣಗಳು ಇರಲಿಲ್ಲ.

ಮಾರುಕಟ್ಟೆಗೆ ಹೋಗಿದ್ದ ಅಪ್ರಾಪ್ತೆ ಮೇಲೆ ಗ್ಯಾಂಗ್‌ ರೇಪ್

ನವೆಂಬರ್‌ 9ರಂದು ವಿಮಾನ ನಿಲ್ದಾಣದಲ್ಲಿ ಮಾಡಿದ ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್‌ ಆಗಿ ಕಂಡು ಬಂದಿದ್ದ ಈತನ ಸ್ಯಾಂಪಲ್‌ಗಳನ್ನು ಜೀನೋಂ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗಿತ್ತು. ಆತನೊಂದಿಗೆ ಸಂಪರ್ಕಕ್ಕೆ ಬಂದಿದ್ದ ಇಬ್ಬರು ಹೈ-ರಿಸ್ಕ್‌ ಕಾಂಟಾಕ್ಟ್ ಮಂದಿ ನೆಗೆಟಿವ್‌ ಕಂಡುಬಂದಿದ್ದಾರೆ ಎಂದು ಬಿಎಂಸಿ ತಿಳಿಸಿದೆ.

ದೇಶದ ಆರ್ಥಿಕ ರಾಜಧಾನಿಯಲ್ಲಿ ಒಮಿಕ್ರಾನ್ ಪೀಡಿತರ ಸಂಖ್ಯೆ 15ಕ್ಕೆ ಏರಿದೆ. ಇವರಲ್ಲಿ ಐವರು ಹೊರಗಿನಿಂದ ಆಚೆ ಬಂದವರು. ಇವರ ಪೈಕಿ 13 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇವರಲ್ಲಿ ಯಾರೊಬ್ಬರಲ್ಲೂ ಗಂಭೀರ ರೋಗ ಲಕ್ಷಣಗಳು ಕಂಡುಬಂದಿಲ್ಲ.

ಮಹಾರಾಷ್ಟ್ರದಲ್ಲಿ ಒಮಿಕ್ರಾನ್ ಪೀಡಿತರ ಸಂಖ್ಯೆ 40ಕ್ಕೆ ಏರಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...