alex Certify ಪ್ಲಾಟ್ಫಾರ್ಮ್ ಟಿಕೆಟ್ ದರವನ್ನು 10 ರಿಂದ 50 ರೂಪಾಯಿಗೆ ಏರಿಸಿದ ಸೆಂಟ್ರಲ್ ರೈಲ್ವೆ…! ಇದರ ಹಿಂದಿದೆ ಈ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ಲಾಟ್ಫಾರ್ಮ್ ಟಿಕೆಟ್ ದರವನ್ನು 10 ರಿಂದ 50 ರೂಪಾಯಿಗೆ ಏರಿಸಿದ ಸೆಂಟ್ರಲ್ ರೈಲ್ವೆ…! ಇದರ ಹಿಂದಿದೆ ಈ ಕಾರಣ

ಸೆಂಟ್ರಲ್ ರೈಲ್ವೆ, ಮಹಾರಾಷ್ಟ್ರದ ಆರು ನಿಲ್ದಾಣಗಳ ಫ್ಲಾಟ್ ಫಾರಂ ಟಿಕೆಟ್ ದರವನ್ನು 10 ರೂಪಾಯಿಗಳಿಂದ 50 ರೂಪಾಯಿಗಳಿಗೆ ಏರಿಕೆ ಮಾಡಿದೆ. ನೂತನ ದರ ಶನಿವಾರದಿಂದಲೇ ಜಾರಿಗೆ ಬಂದಿದ್ದು, ಅಕ್ಟೋಬರ್ 31ರವರೆಗೆ ಅನ್ವಯಿಸಲಿದೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ರೈಲು ನಿಲ್ದಾಣಗಳಲ್ಲಿ ಜನದಟ್ಟಣೆ ಹೆಚ್ಚಾಗುತ್ತಿರುವ ಕಾರಣ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸೆಂಟ್ರಲ್ ರೈಲ್ವೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಿವಾಜಿ ಸುತಾರ್ ತಿಳಿಸಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ದಾದರ್, ಲೋಕಮಾನ್ಯ ತಿಲಕ್ ಟರ್ಮಿನಸ್, ಥಾಣೆ, ಕಲ್ಯಾಣ್ ಹಾಗೂ ಪನ್ವೆಲ್ ರೈಲು ನಿಲ್ದಾಣಗಳಲ್ಲಿ ನೂತನ ದರ ತಾತ್ಕಾಲಿಕವಾಗಿ ಜಾರಿಯಲ್ಲಿರುತ್ತದೆ ಎಂದು ತಿಳಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...