ಮುಂಬೈ: ಮಾತುಂಗಾದ 52 ವರ್ಷದ ಉದ್ಯಮಿಯೊಬ್ಬರು ಬುಧವಾರ ಮುಂಜಾನೆ ಮುಂಬೈ ಟ್ರಾನ್ಸ್ ಹಾಬರ್ಲಿಂಕ್(MTHL) ನ ಭಾಗವಾದ ಅಟಲ್ ಸೇತುದಿಂದ ಜಿಗಿದು ಸಾವನ್ನಪ್ಪಿದ್ದಾರೆ.
ರಾಷ್ಟ್ರೀಕೃತ ಬ್ಯಾಂಕ್‌ನ ಡೆಪ್ಯುಟಿ ಮ್ಯಾನೇಜರ್ ಒಬ್ಬರು ಅಟಲ್ ಸೇತು ಮೇಲಿಂದ ಹಾರಿ ಪ್ರಾಣ ಬಿಟ್ಟ ಎರಡು ದಿನಗಳ ನಂತರ ಈ ಘಟನೆ ನಡೆದಿದೆ. ಮಂಗಳವಾರ ನವಿ ಮುಂಬೈನ ಸಮುದ್ರ ತೀರದಲ್ಲಿ ಅವರ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಮೃತರನ್ನು ಫಿಲಿಪ್ ಹಿತೇಶ್ ಶಾ ಎಂದು ಗುರುತಿಸಲಾಗಿದೆ, ಅವರು ಮಾತುಂಗಾದಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ಕಳೆದ ಕೆಲವು ತಿಂಗಳುಗಳಿಂದ ಫಿಲಿಪ್ ಷಾ ಖಿನ್ನತೆಗೆ ಒಳಗಾಗಿದ್ದರು ಮತ್ತು ಇದರಿಂದಾಗಿ ಅವರು ತಮ್ಮ ಜೀವನವನ್ನು ಕೊನೆಗೊಳಿಸಿದ್ದಾರೆ ಎಂದು ಕುಟುಂಬದವರು ಶಂಕಿಸಿದ್ದಾರೆ.
ಉದ್ಯಮಿ ಫಿಲಿಪ್ ಶಾ ಬುಧವಾರ ಬೆಳಗ್ಗೆ ಅಟಲ್ ಸೇತು ಮೇಲಿಂದ ಹಾರಿ ತಮ್ಮ ಜೀವನವನ್ನು ಅಂತ್ಯಗೊಳಿಸಿದರು, ಮಧ್ಯ ಮುಂಬೈನ ಮಾತುಂಗಾ ನಿವಾಸಿ ಶಾ ಅವರು ತಮ್ಮ ಸೆಡಾನ್ ಕಾರ್ ನಲ್ಲಿ ಅಟಲ್ ಸೇತು ಮೇಲೆ ಬಂದಿದ್ದಾರೆ. ಅಲ್ಲೇ ಕಾರ್ ನಿಲ್ಲಿಸಿ ಸಮುದ್ರಕ್ಕೆ ಹಾರಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸೇತುವೆಯ ಮೇಲೆ ಕಾರ್ ನಿಂತಿರುವುದನ್ನು ಸೇತುವೆಯ ಸಿಸಿಟಿವಿ ನಿಯಂತ್ರಣ ಕೊಠಡಿಯ ಸಿಬ್ಬಂದಿ ಗಮನಿಸಿದ್ದು, ನಂತರ ರಕ್ಷಣಾ ತಂಡಕ್ಕೆ ಎಚ್ಚರಿಕೆ ನೀಡಲಾಗಿದೆ. ಸಿಬ್ಬಂದಿ ಫಿಲಿಪ್ ಶಾ ಸಮುದ್ರಕ್ಕೆ ಹಾರಿದ ಸ್ಥಳಕ್ಕೆ ಧಾವಿಸಿದ್ದಾರೆ.
ಶೋಧ ಕಾರ್ಯಾಚರಣೆಯ ನಂತರ ಕಂಡುಬಂದ ಫಿಲಿಪ್ ಶಾ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಅವರು ಮೃತಪಟ್ಟಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಕಾರ್ ನಲ್ಲಿ ಪತ್ತೆಯಾದ ಆಧಾರ್ ಕಾರ್ಡ್‌ನ ಆಧಾರದ ಮೇಲೆ ಮೃತ ವ್ಯಕ್ತಿಯ ಗುರುತನ್ನು ಪತ್ತೆ ಮಾಡಲಾಗಿದೆ. ನವಿ ಮುಂಬೈನ ನ್ಹವಾ ಶೇವಾ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವಿನ ಪ್ರಕರಣ ದಾಖಲಾಗಿದೆ.
ಸೋಮವಾರ ಬೆಳಗ್ಗೆ ರಾಷ್ಟ್ರೀಕೃತ ಬ್ಯಾಂಕ್‌ನ ಉಪ ವ್ಯವಸ್ಥಾಪಕ ಸುಶಾಂತ್ ಚಕ್ರವರ್ತಿ ಅವರು ಸೇವ್ರಿಯ ಸೇತುವೆಯ ಮೇಲೆ ತಮ್ಮ ಕಾರ್ ನಿಲ್ಲಿಸಿ ಸಮುದ್ರಕ್ಕೆ ಹಾರಿದ್ದರು.