
ಹಾಡಹಗಲೇ ಗುಂಡಿನ ಸುರಿಮಳೆಗರೆದ ಕಿಡ್ನಾಪರ್ ಒಬ್ಬ ಹೊಟೇಲ್ ಮಾಲೀಕರನ್ನು ಅಪಹರಿಸಿದ ಘಟನೆ ಮುಂಬೈನ ಅಂಧೇರಿ-ಕುರ್ಲಾ ರಸ್ತೆಯಲ್ಲಿ ಜರುಗಿದೆ.
ಇಡೀ ಘಟನೆ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆಪಾದಿತರನ್ನು ಮುಂಬೈ ಪೊಲೀಸರು ಈಗ ಬಂಧಿಸಿದ್ದಾರೆ.
ಸಣ್ಣದೊಂದು ಬೀದಿಯಲ್ಲಿ ಇಬ್ಬರು ಪುರುಷರು ಅಲೆದಾಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಇವರಲ್ಲಿ ಒಬ್ಬನ ಕೈಯಲ್ಲಿ ಗನ್ ಹಾಗೂ ಬ್ರೀಫ್‌ಕೇಸ್ ಇದ್ದು, ಮತ್ತೊಬ್ಬ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾನೆ.
ಇದೇ ವೇಳೆ, ಕಪ್ಪು ಕಾರೊಂದು ಸ್ಥಳಕ್ಕೆ ಬಂದು, ಅವರು ಅಲ್ಲಿಂದ ಓಡಿ ಹೋಗಿದ್ದಾರೆ.