ಮುಂಬೈ: ಮುಂಬೈನಲ್ಲಿ ಕಸದತೊಟ್ಟಿಯಲ್ಲಿದ್ದ ಮಗುವನ್ನು ಸ್ವಚ್ಛತಾ ಕಾರ್ಮಿಕ ರಕ್ಷಿಸಿದ್ದಾರೆ. ರಸ್ತೆಗಳನ್ನು ಸ್ವಚ್ಛಗೊಳಿಸುತ್ತಿದ್ದಾಗ ಬಿಎಂಸಿ ಕ್ಲೀನರ್ ಮರೈನ್ ಡ್ರೈವ್ ನ ಎನ್.ಎಸ್. ರಸ್ತೆಯ ಡಸ್ಟ್ ಬಿನ್‌ನಲ್ಲಿ ನವಜಾತ ಶಿಶುವನ್ನು ನೋಡಿದ್ದಾರೆ.
ಸ್ಥಳೀಯರ ಸಹಾಯದಿಂದ ಮಗುವನ್ನು ಕಸದ ತೊಟ್ಟಿಯಿಂದ ಹೊರತೆಗೆದು ಪ್ರಥಮ ಚಿಕಿತ್ಸೆ ಮತ್ತು ಹಾಲು ನೀಡಲಾಗಿದೆ. ನಂತರ ಮರೀನ್ ಡ್ರೈವ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಮಗುವಿನ ಅಪರಿಚಿತ ಪೋಷಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸದ್ಯ ಮಗು ಮಹಾಲಕ್ಷ್ಮಿ ಮಕ್ಕಳ ಕಲ್ಯಾಣ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದೆ. BMC ಕ್ಲೀನರ್ ಅನ್ನು ಮಹೇಶ್ ಜೇತ್ವಾ (40) ಎಂದು ಗುರುತಿಸಲಾಗಿದೆ, ಅವರು ಮಸೀದಿ ಬಂದರ್‌ನಲ್ಲಿರುವ ಸುಕ್ಲಾ ಎಸ್ಟೇಟ್ ಸೊಸೈಟಿಯ ನಿವಾಸಿಯಾಗಿದ್ದಾರೆ.
ಮೇಘದೂತ್ ಸೇತುವೆಯ ಕೆಳಗೆ ಜಿಮ್ಖಾನಾ ಬಸ್ ನಿಲ್ದಾಣದ ಬಳಿ ಇಡಲಾದ ದೊಡ್ಡ ಡಸ್ಟ್ ಬಿನ್‌ನಲ್ಲಿ ಬಟ್ಟೆಯ ತುಂಡಿನೊಳಗೆ ಸುತ್ತಿದ ಮಗುವನ್ನು ಕಂಡ ಕೂಡಲೇ ಅದನ್ನು ಎತ್ತಿಕೊಂಡಿದ್ದಾರೆ. ಸ್ಥಳೀಯರ ನೆರವಿನಿಂದ ಪ್ರಥಮ ಚಿಕಿತ್ಸೆ, ಹಾಲು ನೀಡಿ ರಕ್ಷಿಸಿದ್ದಾರೆ.