alex Certify ಪ್ರಯಾಣಿಕರಿಗೆ ಆಟೋ ಚಾಲಕನಿಂದ ಕುಡಿಯುವ ನೀರಿನ ವ್ಯವಸ್ಥೆ: ಶ್ಲಾಘನೆಗಳ ಮಹಾಪೂರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಯಾಣಿಕರಿಗೆ ಆಟೋ ಚಾಲಕನಿಂದ ಕುಡಿಯುವ ನೀರಿನ ವ್ಯವಸ್ಥೆ: ಶ್ಲಾಘನೆಗಳ ಮಹಾಪೂರ

ಮುಂಬೈ: ದಯೆಯು ಎಂದಿಗೂ ಪ್ರತಿಫಲ ಪಡೆಯದ ಸದ್ಗುಣವಾಗಿದೆ. ಯಾರಾದರೂ ಸಹಾಯ ಹಸ್ತ ಚಾಚುವುದು ಅಥವಾ ಅಪರಿಚಿತರ ಕಡೆಗೆ ದಯೆ ತೋರಿಸುವುದನ್ನು ನೋಡುವುದು ಅಪರೂಪವಾದರೂ, ಆಗಾಗ್ಗೆ ಇಂಥ ಘಟನೆಗಳನ್ನು ನೋಡಬಹುದು.

ಮುಂಬೈನ ಈ ಆಟೋರಿಕ್ಷಾ ಚಾಲಕ ಇದೇ ರೀತಿ ದಯೆಯಿಂದಾಗಿ ಈಗ ಸುದ್ದಿ ಮಾಡುತ್ತಿದ್ದಾರೆ. ನಂದಿನಿ ಅಯ್ಯರ್ ಅವರು ಟ್ವಿಟ್ಟರ್‌ನಲ್ಲಿ ಆಟೋ ಚಾಲಕನ ಕಾರ್ಯವನ್ನು ಶ್ಲಾಘಿಸಿ ಪೋಸ್ಟ್​ ಶೇರ್​ ಮಾಡಿದ್ದಾರೆ.

ಈ ಪೋಸ್ಟ್​ನಲ್ಲಿ ಆಟೋದ ಒಳಗೆ ನೀರಿನ ಬಾಟಲಿಗಳನ್ನು ನೋಡಬಹುದು. ಇದು ಇಲ್ಲೇಕೆ ಎಂದು ಪ್ರಶ್ನಿಸಬಹುದು. ವಾಹನದೊಳಗೆ, ಚಾಲಕನು ಪ್ರಯಾಣಿಕರಿಗಾಗಿ ಇರಿಸಿದ ನೀರಿನ ಬಾಟಲಿಗಳು ಇವು. ಇದಕ್ಕೆ ಆತ ದುಡ್ಡು ಪಡೆಯುವುದಿಲ್ಲ. ಬಿಸಿಲಿನ ಝಳ ಹೆಚ್ಚಿರುವ ಕಾರಣ, ಪ್ರಯಾಣಿಕರು ನೀರನ್ನು ಕುಡಿಯುವುದಕ್ಕಾಗಿ ಈ ಬಾಟಲಿಗಳನ್ನು ಇಟ್ಟಿದ್ದಾನೆ. ಈ ಚಾಲಕನ ಕಾರ್ಯಕ್ಕೆ ಶ್ಲಾಘನೆಗಳು ಹರಿದುಬಂದಿವೆ.

https://twitter.com/fillumwaalii/status/1642793141257240576?ref_src=twsrc%5Etfw%7Ctwcamp%5Etweetembed%7Ctwterm%5E1642793141257240576%7Ctwgr%5E41964587196b4c842c7d0156570fe599f70132c9%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fmumbai-autowala-keeps-free-water-bottles-for-passengers-his-kind-gesture-has-twitters-attention-2355182-2023-04-03

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...