ಕರುಣಾಮಯಿ ಜನರು ಎಲ್ಲೆಲ್ಲೂ ಇರುತ್ತಾರೆ. ಈ ಮಾತನ್ನು ಪದೇ ಪದೇ ಸಾಬೀತು ಪಡಿಸುವ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ನಮ್ಮನ್ನು ತಲುಪುತ್ತಲೇ ಇರುತ್ತವೆ.
ಮಹಿಳೆಯೊಬ್ಬರು ತಮ್ಮ ನಾಯಿಯೊಂದಿಗೆ ಮನೆಗೆ ತೆರಳುತ್ತಿದ್ದು, ಆಟೋ ರಿಕ್ಷಾ ಚಾಲಕರು ನಾಯಿಯನ್ನು ಕೂರಿಸಿಕೊಳ್ಳಲು ನಿರಾಕರಿಸಿದ್ದರು. ಆದರೆ ಇದೇ ವೇಳೆ ಇಲ್ಲೊಬ್ಬ ರಿಕ್ಷಾ ಚಾಲಕ ತಾನು ಪ್ರಾಣಿ ಪ್ರಿಯನೆಂದೂ, ನಾಯಿಯನ್ನು ತನ್ನ ವಾಹನದಲ್ಲಿ ಕೂರಿಸಿಕೊಂಡು ಹೋಗಲು ತನಗೆ ಖುಷಿಯೆಂದೂ, ತಾನು ಇದಕ್ಕೆ ಮೀಟರ್‌ನಲ್ಲಿ ಬಂದಷ್ಟು ಮಾತ್ರವೇ ಶುಲ್ಕ ವಿಧಿಸುವುದಾಗಿ ತಿಳಿಸಿದ್ದಾರೆ.
ಆಸ್ಕರ್‌ಎನ್‌ಕರ್ಮ ಹೆಸರಿನ ಚಾನೆಲ್ ಒಂದು ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
“ಸೂಪರ್‌ಹೀರೋಗಳಿಗೆ ರೆಕ್ಕೆಗಳಿರುವುದಿಲ್ಲ. ಅವರೇ ನಿಜವಾದ ಜನರು,” ಎಂದು ಕ್ಯಾಪ್ಷನ್ ಹಾಕಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.