ಮುಂಬೈ: ಆಂಟಿ ನಾರ್ಕೋಟಿಕ್ಸ್ ಸೆಲ್ ಮಹತ್ವದ ಕಾರ್ಯಾಚರಣೆ ನಡೆಸಿದ್ದು, ಮುಂಬೈನ ಧಾರಾವಿ ಪ್ರದೇಶದ 24 ವರ್ಷದ ಮಹಿಳಾ ಡ್ರಗ್ ಪೆಡ್ಲರ್ ಳನ್ನು ಬಂಧಿಸಲಾಗಿದೆ.
ಬಂಧಿತಳಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 2.6 ಲಕ್ಷ ರೂಪಾಯಿ ಮೌಲ್ಯದ 26 ಗ್ರಾಂ ಎಂಡಿ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ಬಂಧಿತ ಮಹಿಳೆ ವಿರುದ್ಧ ಪೊಲೀಸರು ಎನ್.ಡಿ.ಪಿ.ಎಸ್. ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ ಎಂದು ಮಾದಕ ದ್ರವ್ಯ ನಿಗ್ರಹ ಕೋಶದ ಡಿಸಿಪಿ ದತ್ತಾ ನಲವಾಡೆ ಮಾಹಿತಿ ನೀಡಿದ್ದಾರೆ,
ಗೋವಂಡಿ ಪ್ರದೇಶದಲ್ಲಿ ಮೂವರು ಡ್ರಗ್ ದಂಧೆಕೋರರನ್ನು ಬಂಧಿಸಲಾಗಿದ್ದು, 2.5 ಕೆಜಿ ಚರಸ್ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಮಾದಕ ದ್ರವ್ಯಗಳ ಮೌಲ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 75 ಲಕ್ಷ ರೂ., ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ: ದತ್ತಾ ನಲವಾಡೆ ತಿಳಿಸಿದ್ದಾರೆ.