ಮುಂಬೈ: ಮುಂಬೈನ ಅಂಧೇರಿ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿನಿಂದ ಬಿದ್ದು ವ್ಯಕ್ತಿಯೊಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯಲ್ಲಿ ಆರ್‌ಪಿಎಫ್ ಸಿಬ್ಬಂದಿಯ ಸಮಯೋಚಿತ ಮಧ್ಯಪ್ರವೇಶದಿಂದ ಸಂಭವನೀಯ ದುರಂತ ತಪ್ಪಿದೆ.
ಭಾನುವಾರ ಲೋಕಶಕ್ತಿ ಎಕ್ಸ್‌ಪ್ರೆಸ್ ರೈಲು ಅಂಧೇರಿ ನಿಲ್ದಾಣದ ಎಂಟನೇ ಪ್ಲಾಟ್‌ಫಾರ್ಮ್‌ನಿಂದ ಹೊರಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ರಾಜೇಂದ್ರ ಮಂಗಿಲಾಲ್ (40) ಎಂಬ ವ್ಯಕ್ತಿ ಅಹಮದಾಬಾದ್‌ಗೆ ತೆರಳಲು ರೈಲು ಹತ್ತಲು ಪ್ರಯತ್ನಿಸುತ್ತಿದ್ದರು. ಆದರೆ ಅವರು ಆಯತಪ್ಪಿ ಪ್ಲಾಟ್‌ಫಾರ್ಮ್ ಮೇಲೆ ಬಿದ್ದಿದ್ದಾರೆ. ಅವರ ಕಾಲು ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವೆ ಸಿಲುಕಿಕೊಂಡಿತ್ತು.
ಈ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಆರ್‌ಪಿಎಫ್ ಸಹಾಯಕ ಉಪ-ನಿರೀಕ್ಷಕ ಪಹುಪ್ ಸಿಂಗ್ ಅವರು ತಕ್ಷಣ ಕಾರ್ಯಪ್ರವೃತ್ತರಾಗಿ ಮಂಗಿಲಾಲ್ ಅವರನ್ನು ಸುರಕ್ಷಿತವಾಗಿ ಹೊರತೆಗೆದರು. ಈ ಮೂಲಕ ಅವರ ಜೀವ ಉಳಿಸಿದ್ದಾರೆ. ಈ ಸಾಹಸದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಂಗಿಲಾಲ್ ಅವರು ತಡವಾಗಿ ಬಂದ ಕಾರಣ ಚಲಿಸುತ್ತಿದ್ದ ರೈಲನ್ನು ಹತ್ತಲು ಪ್ರಯತ್ನಿಸಿದೆ ಎಂದು ಒಪ್ಪಿಕೊಂಡಿದ್ದಾರೆ. ಆರ್‌ಪಿಎಫ್ ಸಿಬ್ಬಂದಿಯ ಸಮಯೋಚಿತ ಸಹಾಯದಿಂದ ಅವರು ದೊಡ್ಡ ಅಪಾಯದಿಂದ ಪಾರಾಗಿದ್ದಾರೆ.
‘Operation Life Saving’ at Andheri Railway Station; Passenger Rescued While Boarding Moving Train.
Andheri, February 16, 2025: A crucial rescue operation under ‘Operation Life Saving’ took place today at platform number 8 of Andheri railway station. As Lokshakti Express (Train… pic.twitter.com/leu4O2Sz0P
— SUDHAKAR EDWIN NADAR (@nadarsudhakar29) February 16, 2025