ಟ್ವಿಟರ್ ಹ್ಯಾಂಡಲ್ ಮೂಲಕ ಮುಸ್ಲಿಂ ಮಹಿಳೆಯರ ಚಿತ್ರಗಳನ್ನು ಆಕ್ಷೇಪಾರ್ಹವಾಗಿ ತೋರುತ್ತಿದ್ದ ಅಪ್ಲಿಕೇಶನ್ ಒಂದರ ಲಿಂಕ್‌ಗಳನ್ನು ಶೇರ್ ಮಾಡುತ್ತಿದ್ದ ಆಪಾದನೆ ಮೇಲೆ ಬೆಂಗಳೂರು ಮೂಲದ 21 ವರ್ಷ ವಯಸ್ಸಿನ ವಿದ್ಯಾರ್ಥಿಯನ್ನು ಮುಂಬಯಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಮಂಗಳವಾದ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಕೋರಲಾಗಿದೆ. ಪ್ರಕರಣ ಸಂಬಂಧ ಉತ್ತರಾಖಂಡದ ಮಹಿಳೆಯೊಬ್ಬರನ್ನು ಸಹ ಬಂಧಿಸಲಾಗಿದೆ.
ಆಟೋರಿಕ್ಷಾ ಹಿಂಬರಹದ ಥೀಂ ಬಳಸಿ ಮುಂಬೈ ಪೊಲೀಸರಿಂದ ಕೋವಿಡ್ ಜಾಗೃತಿ
ಟ್ವಿಟರ್ ಖಾತೆಯ ಐಪಿ ವಿಳಾಸದ ಮೂಲಕ ಬಂಧಿತ ವಿದ್ಯಾರ್ಥಿಯ ವಿಳಾಸ ಪತ್ತೆ ಮಾಡಲಾಗಿದೆ. ಈ ಅಪ್ಲಿಕೇಶನ್ ಅಭಿವೃದ್ಧಿ ಹಿಂದೆ ಯಾರೆಲ್ಲಾ ಇದ್ದಾರೆ ಎಂದು ಬಂಧಿತನನ್ನು ವಿಚಾರಣೆಗೈದು ಕಂಡುಕೊಳ್ಳುವ ಯತ್ನದಲ್ಲಿ ಪೊಲೀಸರು ಇದ್ದಾರೆ.
ಅಪ್ಲಿಕೇಶನ್‌ನಿಂದ ಸಂತ್ರಸ್ತೆಯಾಗಿರುವ ಮಹಿಳೆಯೊಬ್ಬರು ಕೊಟ್ಟ ದೂರಿನ ಮೇಲೆ ಕಾರ್ಯಪ್ರವೃತ್ತರಾದ ಮುಂಬಯಿ ಪೊಲೀಸರು ಜನವರಿ 1ರಂದು ಎಫ್‌ಐಆರ್ ದಾಖಲಿಸಿಕೊಂಡಿದ್ದರು.
ಅಮೆರಿಕ ಮೂಲದ ಗಿಟ್‌ಹಬ್ ಎಂಬ ಪ್ಲಾಟ್‌ಫಾರಂನಲ್ಲಿ ಹೋಸ್ಟಿಂಗ್ ಮಾಡಲಾಗಿದ್ದ ಈ ಅಪ್ಲಿಕೇಶನ್‌ನಲ್ಲಿ 100ಕ್ಕೂ ಹೆಚ್ಚು ಮಹಿಳೆಯರ ಎಡಿಟ್ ಮಾಡಲಾದ ಚಿತ್ರಗಳಿದ್ದು, ಜೊತೆಯಲ್ಲಿ ಆಕ್ಷೇಪಾರ್ಹ ಕಾಮೆಂಟ್‌ಗಳೊಂದಿಗೆ ಆನ್ಲೈನ್‌ನಲ್ಲಿ ಶೇರ್ ಮಾಡಲಾಗಿದೆ.
ಈ ವಿಚಾರವಾಗಿ ಪತ್ರಕರ್ತರೊಬ್ಬರು ಕೊಟ್ಟ ದೂರಿನ ಅನ್ವಯ ದೆಹಲಿ ಪೊಲೀಸರು ಸಹ ಪ್ರಕರಣ ದಾಖಲಿಸಿಕೊಂಡಿದ್ದಾರೆ.