ಈ ವರ್ಷದ ಗಣೇಶ ಚತುರ್ಥಿಯ ಐದನೇ ದಿನದಂದು ಮುಂಬೈನಲ್ಲಿ ಒಟ್ಟು 81,570 ಗಣಪತಿ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ 2026 ಹೆಚ್ಚು ವಿಗ್ರಹಗಳು ವಿಸರ್ಜನೆಗೊಂಡಿವೆ ಅನ್ನೋದು ತಿಳಿದುಬಂದಿದೆ.
ಕಳೆದ ವರ್ಷ 79,404 ಗಣೇಶ ಹಾಗೂ ಗೌರಿ ಮೂರ್ತಿಯನ್ನು ವಿಸರ್ಜನೆ ಮಾಡಲಾಗಿತ್ತು.
ಬಿಎಂಸಿ ಪ್ರಕಾರ, ಐದನೇ ದಿನ 1,432 ಸಾರ್ವಜನಿಕ ಗಣೇಶ ಮೂರ್ತಿಗಳು, 72,367 ಮನೆಯಲ್ಲಿ ಇರಿಸಿದ ಗಣಪತಿ ವಿಗ್ರಹಗಳು ಮತ್ತು 7,771 ಗೌರಿ ಮೂರ್ತಿಗಳು ವಿಸರ್ಜನೆಗೊಂಡಿವೆ. ಒಟ್ಟು 81,570 ವಿಗ್ರಹಗಳನ್ನು ವಿಸರ್ಜಿಸಲಾಗಿದೆ. ಇವುಗಳಲ್ಲಿ 598 ಸಾರ್ವನಿಕ ಗಣಪತಿ , 29792 ಮನೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಗಣಪತಿ ಹಾಗೂ 2329 ಗೌರಿ ವಿಗ್ರಹಗಳು ವಿಸರ್ಜನೆಯಾಗಿವೆ. ಈ ಬಾರಿ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ ಅಂತಾ ಬಿಎಂಸಿ ಮಾಹಿತಿ ನೀಡಿದೆ.
ಈ ವರ್ಷ ಸನಾತನ ಪಂಚಾಂಗದ ಪ್ರಕಾರ, ಏಳನೇ ದಿನ ಗಣೇಶ ಮೂರ್ತಿಗಳ ವಿಸರ್ಜನೆ ಐದನೇ ದಿನಕ್ಕೆ ಬಂದಿದೆ. ಆದ್ದರಿಂದ ಐದನೇ ದಿನ ಹೆಚ್ಚಿನ ವಿಗ್ರಹಗಳು ವಿಸರ್ಜನೆಯಾಗಿವೆ. ಬಿಎಂಸಿ ಪ್ರಕಾರ, ಹಲವಾರು ವಿಗ್ರಹಗಳ ವಿಸರ್ಜನೆಯು ತಡರಾತ್ರಿ ನಡೆಯುತ್ತದೆ ಎಂದು ತಿಳಿಸಿದೆ.
ಅಧಿಕಾರಿಯೊಬ್ಬರು ನೀಡಿರುವ ಮಾಹಿತಿಯ ಪ್ರಕಾರ, ಮುಂಬೈನಲ್ಲಿ ಕೃತಕ ಕೊಳಗಳ ಸಂಖ್ಯೆಯನ್ನು ಬಿಎಂಸಿ ದ್ವಿಗುಣಗೊಳಿಸಿದೆ. ಈ ವರ್ಷ ಗಣೇಶ ವಿಸರ್ಜನೆಗೆ 300 ಕೃತಕ ಕೊಳಗಳನ್ನ ನಿರ್ಮಿಸಲಾಗುತ್ತೆ. ಇದಲ್ಲದೇ ನಾಗರಿಕರು 69 ಇಮ್ಮರ್ಶನ್ ಸ್ಪಾಟ್ಗಳಲ್ಲಿ ಮುಳುಗಿಸಬಹುದು ಎಂದು ತಿಳಿದು ಬಂದಿದೆ.