alex Certify ವಾಟ್ಸಾಪ್ ನಲ್ಲಿ ಸೆಂಡ್ ಆಯ್ತು ಬೆತ್ತಲೆ ಫೋಟೋ, ವಿಡಿಯೋ: ಹುಡುಗಿಗೆ ಕಿರುಕುಳ ನೀಡಿದ ಇಬ್ಬರು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಟ್ಸಾಪ್ ನಲ್ಲಿ ಸೆಂಡ್ ಆಯ್ತು ಬೆತ್ತಲೆ ಫೋಟೋ, ವಿಡಿಯೋ: ಹುಡುಗಿಗೆ ಕಿರುಕುಳ ನೀಡಿದ ಇಬ್ಬರು ಅರೆಸ್ಟ್

ಮುಂಬೈ: ಇಬ್ಬರು ಪುರುಷರು ಮಹಾರಾಷ್ಟ್ರದ ಮುಂಬೈನಲ್ಲಿ 10 ವರ್ಷದ ಬಾಲಕಿಗೆ ನಗ್ನ ಫೋಟೋಗಳು ಮತ್ತು ವಿಡಿಯೋಗಳನ್ನು ಕಳುಹಿಸುವ ಮೂಲಕ ಲೈಂಗಿಕ ಕಿರುಕುಳ ನೀಡಿದ್ದಾರೆ.

ಮಗುವಿನ ಪೋಷಕರ ದೂರಿನ ಮೇರೆಗೆ, ಮುಂಬೈ ಅಪರಾಧ ವಿಭಾಗದ ಪೊಲೀಸರು ಅಜಯ್ ತುಕಾರಾಂ ಮಾತ್ರೆ (30) ಮತ್ತು ಭಜನಲಾಲ್ ಜನಿಯಾನಿ(29) ಅವರನ್ನು ಬಂಧಿಸಿದ್ದಾರೆ.

ವರದಿಗಳ ಪ್ರಕಾರ, 10 ವರ್ಷದ ಬಾಲಕಿಯ ಪೋಷಕರು ಆಕೆಯ ಶಾಲೆಯ ಆನ್ ಲೈನ್ ಕ್ಲಾಸ್ ಗೆ ಹಾಜರಾಗಲು ಮೊಬೈಲ್ ಫೋನ್ ನೀಡಿದ್ದರು. ಫೋನ್ ಬಳಸಿ, ಅವಳು WhatsApp ಮತ್ತು Snapchat ನಲ್ಲಿ ಸೈನ್ ಅಪ್ ಮಾಡಿದಳು. ಕಳೆದ ವಾರ, ಅಪ್ರಾಪ್ತ ಬಾಲಕಿ ತನ್ನ ಸ್ನ್ಯಾಪ್‌ಚಾಟ್ ಖಾತೆಯಲ್ಲಿ ನ್ಯೂಡ್ ಫೋಟೋಗಳು ಮತ್ತು ವೀಡಿಯೋಗಳನ್ನು ಪಡೆದಿದ್ದಳು.

ನಂತರ ಸಂತ್ರಸ್ತೆಯ ಫೋನ್ ಸಂಖ್ಯೆ ಮತ್ತು ಆಕೆಯ ಸ್ನ್ಯಾಪ್‌ಚಾಟ್ ಖಾತೆ ವಿವರಗಳನ್ನು ಭಜನ್ ಲಾಲ್ ಆತನ ಸ್ನೇಹಿತ ಅಜಯ್ ತುಕಾರಾಂ ಮಾತ್ರೆ ಜೊತೆಗೆ ಹಂಚಿಕೊಂಡಿದ್ದು, ಆಕೆಗೆ ತನ್ನ ನಗ್ನ ಚಿತ್ರಗಳು ಮತ್ತು ವೀಡಿಯೋಗಳನ್ನು ಕಳುಹಿಸಿದ್ದಾನೆ. ಇದರಿಂದಾಗಿ ಸಂತ್ರಸ್ತೆ ಆಘಾತಕ್ಕೊಳಗಾಗಿದ್ದಾಳೆ. ಗೊತ್ತಿಲ್ಲದ ನಂಬರ್ ನಿಂದ ಅಂತಹ ಅಶ್ಲೀಲ ಫೋಟೋಗಳು ಮತ್ತು ವೀಡಿಯೊಗಳು ಬರತೊಡಗಿದ್ದರಿಂದ ಮೌನವಾಗಿದ್ದಾಳೆ.

ಇದಾದ ನಂತರ ಇಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಹುಡುಗಿಗೆ ಸಂದೇಶ ಕಳುಹಿಸಲು ಆರಂಭಿಸಿದರು. ಅವರು ತಮ್ಮ ಫೋಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳಲು ಹುಡುಗಿಗೆ ಕೇಳಿಕೊಂಡಿದ್ದಾರೆ. ಆದರೆ ಬಾಲಕಿ ಅವರ ಬೇಡಿಕೆ ತಿರಸ್ಕರಿಸಿದ್ದಾಳೆ. ನಂತರ ಅವರು ಬಾಲಕಿ ಪೋಷಕರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದಾದ ನಂತರ ಬಾಲಕಿ ಪೋಷಕರ ಬಳಿ ತನ್ನ ಸಂಕಷ್ಟ ಹೇಳಿಕೊಂಡಿದ್ದಾಳೆ.

ನಂತರ ಪೋಷಕರು ಪೋಲಿಸರಿಗೆ ದೂರು ನೀಡಿದರು. ದೂರಿನ ಆಧಾರದ ಮೇಲೆ ಪೊಲೀಸರು ಇಬ್ಬರು ಆರೋಪಿಗಳ ವಿರುದ್ಧ ವಿವಿಧ ಸೆಕ್ಷನ್ ಗಳಡಿ ಕೇಸ್ ದಾಖಲಿಸಿಕೊಂಡು ಬಂಧಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...