alex Certify ಅಪರೂಪದ ಘಟನೆ: 15 ನಿಮಿಷಗಳ ಅಂತರದಲ್ಲಿ ಜನಿಸಿದ್ದಕ್ಕೆ ಅವಳಿಗಳ ಹುಟ್ಟಿದ ವರ್ಷವೇ ಬೇರೆ ಬೇರೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪರೂಪದ ಘಟನೆ: 15 ನಿಮಿಷಗಳ ಅಂತರದಲ್ಲಿ ಜನಿಸಿದ್ದಕ್ಕೆ ಅವಳಿಗಳ ಹುಟ್ಟಿದ ವರ್ಷವೇ ಬೇರೆ ಬೇರೆ….!

ಅಮೆರಿಕದಲ್ಲಿಈ ಹೊಸ ವರ್ಷಕ್ಕೆ ಬಹಳ ಅಪರೂಪದ ಘಟನೆಯೊಂದು ಜರುಗಿದೆ. ಅವಳಿಗಳ ಜನನವಾಗಿದೆ, ಆದರೆ ಒಂದು ಮಗು 2021ರಲ್ಲಿ ಹುಟ್ಟಿದೆ. ಮತ್ತೊಂದು 2022ರಲ್ಲಿ…!

ಹೌದು, 15 ನಿಮಿಷಗಳ ಅಂತರದಲ್ಲಿಅಣ್ಣ-ತಂಗಿ ಜನಿಸಿದ್ದಾರೆ. ಕ್ಯಾಲಿಫೊರ್ನಿಯಾದ ಫಾತಿಮಾ ಮ್ಯಾದ್ರಿಗಲ್‌ ಅವರು ಡಿ.31ರ ರಾತ್ರಿ 11.45ಕ್ಕೆ ಮಗ ಅಲ್‌ಫ್ರೆಡೊಗೆ ಜನ್ಮ ನೀಡಿದ್ದಾರೆ. ಬಳಿಕ 2022ರ ಜನವರಿ 1ರಂದು ಸರಿಯಾಗಿ 12.00 ಗಂಟೆ ಮಧ್ಯರಾತ್ರಿಗೆ ಆಯ್ಲಿನ್‌ ಜನಿಸಿದ್ದಾಳೆ.

ಇಲ್ಲಿ ಬಹಳ ವಿಶೇಷ ಇರುವುದು ಮುಂದೆ ಈ ಅವಳಿ ಮಕ್ಕಳು ಜನ್ಮದಿನಾಚರಣೆ ಆಚರಿಸಿಕೊಳ್ಳುವ ರೀತಿಯಲ್ಲಿ, ಅವಳಿಗಳಾದರೂ ಒಂದೇ ದಿನ ಹ್ಯಾಪಿ ಬರ್ತ್‌ಡೇ ಹೇಳುವಂತಿಲ್ಲ, ಅಲ್ಲವೇ?

ವೀರ ಕನ್ನಡಿಗನ‌ ಮಹಾಸಾಧನೆ, ವಿದೇಶದಲ್ಲಿ ಕನ್ನಡ ಬಾವುಟ ಹಾರಿಸಿದ ʼಪುರುಷೋತ್ತಮʼ

ಈ ತರಹದ ಅಪರೂಪದ ಅವಳಿಗಳ ಜನನ 20 ಲಕ್ಷ ಪ್ರಕರಣಗಳ ಪೈಕಿ ಒಬ್ಬರಲ್ಲಿ ಮಾತ್ರವೇ ಕಂಡುಬರಲಿದೆ. ಕೊರೊನಾದಿಂದ ಅತಿಹೆಚ್ಚು ಜನರು ಬಾಧಿತರಾದ 2021 ಹಾಗೂ 2022ರ ಆರಂಭಿಕ ಹಂತದಲ್ಲಿಸುರಕ್ಷಿತವಾಗಿ ಅವಳಿ ಮಕ್ಕಳು ಜನಿಸಿರುವುದು ದೇವರ ದಯೆಯೇ ಸರಿ.

ಈ ವರ್ಷ ಅಮೆರಿಕದಲ್ಲಿ1.20 ಲಕ್ಷ ಅವಳಿ ಮಕ್ಕಳ ಜನ್ಮವಾಗಿದೆ. ಆದರೆ, ಎರಡು ಬೇರೆ ದಿನಾಂಕಗಳಲ್ಲಿಅವಳಿಗಳು ಜನಿಸಿರುವುದು ಬಹಳ ಅಪರೂಪ, ನಮ್ಮ ಆಸ್ಪತ್ರೆಯಲ್ಲಿ ಮೊದಲ ಬಾರಿ ಎಂದು ಪ್ರಸೂತಿ ತಜ್ಞೆ ಡಾ. ಅನಾ ಅಬ್ರಿಲ್‌ ಎರಿಯಾಸ್‌ ಹೇಳಿದ್ದಾರೆ.

2019ರಲ್ಲಿಇದೇ ಮಾದರಿಯಲ್ಲಿಅವಳಿಗಳ ಜನ್ಮವಾಗಿತ್ತು. 2019ರ ಡಿಸೆಂಬರ್‌ 31ರಂದು ರಾತ್ರಿ 11.37ಕ್ಕೆ ಮೊದಲ ಮಗು ಜನಿಸಿತ್ತು. ಬಳಿಕ 2020ರ ಜನವರಿ 1ರ ಮಧ್ಯರಾತ್ರಿ 12.07ಕ್ಕೆ ಅವಳಿ ಮಗು ಜನನವಾಗಿತ್ತು. ಅಪರೂಪದ ಪ್ರಕರಣ ಇಂಡಿಯಾನಾದ ಸೇಂಟ್‌ ವಿನ್ಸೆಂಟ್‌ ಆಸ್ಪತ್ರೆಯಲ್ಲಿ ವರದಿಯಾಗಿತ್ತು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...