ಕೆಲವು ಕಚೇರಿಗಳಲ್ಲಿ ಬಾಸ್ ಹಾಗೂ ಉದ್ಯೋಗಿಗಳ ಸಂಬಂಧ ಅಷ್ಟಕಷ್ಟೇ ಇರುತ್ತದೆ. ಇನ್ನು ತುರ್ತಾಗಿ ರಜಾ ಕೇಳಿದಾಗ ಸಿಗದೇ ಇದ್ದಲ್ಲಿ ಕೆಲವರು ಆ ಉದ್ಯೋಗ ಬಿಟ್ಟು ಹೊರಬರಲೂಬಹುದು.
ಇದಕ್ಕೆ ಕಂಪನಿ ದೊಡ್ಡ ಮೊತ್ತವನ್ನು ಪರಿಹಾರವಾಗಿ ಪಾವತಿಯೂ ಮಾಡಬೇಕಾದಿತು.
ಯುಕೆ ನಲ್ಲಿ ಉದ್ಯೋಗಿಯೊಬ್ಬರು ತನ್ನ ಪುಟ್ಟ ಮಗಳನ್ನು ನರ್ಸರಿ ಶಾಲೆಯಿಂದ ಕರೆದುಕೊಂಡು ಬರುವುದಕ್ಕಾಗಿ ಅನುಮತಿ ಕೇಳಿದ್ದಾಳೆ. ಆದರೆ ಮ್ಯಾನೇಜರ್ ನಿರಾಕರಿಸಿದ್ದರಿಂದ ಎಸ್ಟೇಟ್ ಏಜೆಂಟ್ ಆಗಿದ್ದ ಮಹಿಳೆಗೆ 1,85,000 ಪೌಂಡ್ ಅಂದರೆ ಸುಮಾರು 1.8 ಕೋಟಿ ರೂ. ಮೊತ್ತ ಪರಿಹಾರ ನೀಡಬೇಕಾಯಿತು.
2018ರಲ್ಲಿ ಮಗುವಿಗೆ ಜನ್ಮ ನೀಡಿದ ಬಳಿಕವೂ ಆಫೀಸ್, ಮನೆ ಅಂತಾ ಮಹಿಳೆ ಕೆಲಸ ನಿಭಾಯಿಸಬೇಕಾಗುತ್ತಿತ್ತು. ಹೀಗಾಗಿ ಮಗಳನ್ನು ನರ್ಸರಿ ಸ್ಕೂಲ್ ನಿಂದ ಕರೆದುಕೊಂಡು ಬರುವುದಕ್ಕಾಗಿ ರಜಾ ಕೊಡುವಂತೆ ಕೇಳಿಕೊಂಡಿದ್ದಳು. ಅಲ್ಲದೆ ವಾರಕ್ಕೆ 4 ದಿನ ಆಫೀಸಿನಲ್ಲಿ ಬಂದು ಕೆಲಸ ಮಾಡಲು ಅನುಮತಿಗಾಗಿ ಬೇಡಿಕೊಂಡಳು. ಆದರೆ ಇದಕ್ಕೆ ಕಂಪನಿ ನಿರ್ದೇಶಕರು ಮಾತ್ರ ಸುತರಾಂ ಒಪ್ಪಿಲ್ಲ.
BIG BREAKING: ತಾಲಿಬಾನ್ ಸರ್ಕಾರ ಅಸ್ತಿತ್ವಕ್ಕೆ, ಪ್ರಧಾನಿಯಾಗಿ ಮುಲ್ಲಾ ಹಸನ್ ಅಖುಂದಾ -ಹಕ್ಕಾನಿಗಳಿಗೆ ಪ್ರಮುಖ ಖಾತೆ
ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ ಅವರು, ಈ ನೌಕರರ ನ್ಯಾಯಮಂಡಳಿಗೆ ದೂರು ನೀಡಿದರು. ಹಾಗೂ ಕಂಪನಿ ನಿರ್ದೇಶಕರು ಹಾಗೂ ತಮ್ಮ ನಡುವಿನ ಔದ್ಯೋಗಿಕ ಸಂಬಂಧ ಹೇಗೆಲ್ಲಾ ಹಳಸಿತು ಎಂಬ ಬಗ್ಗೆ ವಿವರಿಸಿದರು. ಈ ಬಗ್ಗೆ ವಿಚಾರಣೆ ನಡೆಸಲಾಗಿ, ಅಂತಿಮವಾಗಿ ಕಂಪನಿಗೆ ದೊಡ್ಡ ಹೊಡೆತವೇ ಬಿತ್ತು. ಮಹಿಳೆಗೆ ಪರಿಹಾರವಾಗಿ 1.8 ಕೋಟಿ ರೂ. ನೀಡಬೇಕೆಂದು ಆದೇಶಿಸಲಾಯಿತು.