ಹಾರುವ ತಟ್ಟೆಗಳ ಕುರಿತು ಮಾನವನ ಕುತೂಹಲಕ್ಕೆ ಇನ್ನೂ ತೆರೆ ಬಿದ್ದಿಲ್ಲ. ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಒಂದು ಈ ಕುತೂಹಲವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ.
ಈ ವಿಲಕ್ಷಣ ಎನ್ಕೌಂಟರ್ ಅನ್ನು ಕ್ಯಾಪ್ಟನ್ ವ್ಯಾನ್ ಪಂಗೆಮನನ್ ದಾಖಲಿಸಿದ್ದು, ಅವರು ತಮ್ಮ ಯೂಟ್ಯೂಬ್ ಚಾನೆಲ್‌ಗೆ ಈ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾರೆ. ಬೋಯಿಂಗ್ 747 ನ ಕಾಕ್‌ಪಿಟ್‌ನಿಂದ ತೆಗೆದ ವಿಡಿಯೋದಲ್ಲಿ, ಹೊಳೆಯುವ ಮಂಡಲಗಳ ಮಧ್ಯದಲ್ಲಿ ಹಾರುವ ತಟ್ಟೆಯಂತಹ ಅಕೃತಿ ತೂಗಾಡುತ್ತಿರುವುದು ಕಂಡು ಬರುತ್ತದೆ.
ನಾವು ಮೊದಲು ಅದನ್ನು ವಿಮಾನ ಎಂದು ಭಾವಿಸಿದ್ದೇವು, ಆದರೆ ಅದು ನಮ್ಮ ರಾಡಾರ್‌ನಲ್ಲಿ ಇರಲಿಲ್ಲ ಎಂದು ಕ್ಯಾಪ್ಟನ್ ಪಾಂಗೆಮನನ್ ಹೇಳಿದ್ದಾರೆ.
ವಿಮಾನವು ಸೌದಿ ಅರೇಬಿಯಾದ ಜೆಡ್ಡಾದಿಂದ ನೈಜೀರಿಯಾದ ಅಬುಜಾ ಮಾರ್ಗವಾಗಿ ಹೊರಟ ಸ್ವಲ್ಪ ಸಮಯದ ನಂತರ ಸ್ಥಳೀಯ ಸಮಯ ಬೆಳಿಗ್ಗೆ 5 ಗಂಟೆಯ ಸುಮಾರಿಗೆ ಈ ದೃಶ್ಯ ಕಂಡುಬಂದಿದೆ. ಹಾರಾಟದ ಸುಮಾರು 30 ನಿಮಿಷಗಳ ನಂತರ, ಸಿಬ್ಬಂದಿ ಕಾಕ್‌ಪಿಟ್ ಕಿಟಕಿಯ ಹೊರಗೆ ಹೊಳೆಯುವ ಗೋಳಗಳನ್ನು ಗಮನಿಸಿದ್ದಾರೆ.
ಕೆಲವರು ಈ ದೃಶ್ಯವನ್ನು ಪರ್ಸಿಡ್ ಉಲ್ಕಾಪಾತಕ್ಕೆ ಕಾರಣವೆಂದು ಹೇಳಿದ್ದಾರೆ, ಆದರೆ ವಿಡಿಯೋಗೆ ಪ್ರತಿಕ್ರಿಯಿಸಿರುವ ನಿವೃತ್ತ ಪೈಲಟ್ ಪಾಲ್ ಬಿಷಪ್, “ಕೊರಿಯಾಕ್ಕೆ ಹೋಗುವ ದಾರಿಯಲ್ಲಿ ಜಪಾನ್ ಸಮುದ್ರದ ಮೇಲೆ ಅದೇ ರೀತಿಯ ಬೆಳಕು ಹಾರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ” ಎಂದಿದ್ದಾರೆ