ಬೆಂಗಳೂರು ವಿಮಾನ ನಿಲ್ದಾಣದಿಂದ ಸೋಮವಾರ 50ಕ್ಕೂ ಹೆಚ್ಚು ಪ್ರಯಾಣಿಕರನ್ನು ಬಿಟ್ಟು ಟೇಕಾಫ್ ಆದ ಗೋ ಫಸ್ಟ್ ವಿಮಾನಯಾನ ಸಂಸ್ಥೆಗೆ ವಿಮಾನಯಾನ ನಿಯಂತ್ರಕ ನಿರ್ದೇಶನಾಲಯ(ಡಿಜಿಸಿಎ) ಶೋಕಾಸ್ ನೋಟಿಸ್ ನೀಡಿದೆ.
ಬಹು ತಪ್ಪುಗಳು ಘಟನೆಗೆ ಕಾರಣವಾಗಿದೆ ಎಂದು ಡಿಜಿಸಿಎ ಹೇಳಿದ್ದು, ಸರಿಯಾದ ಸಂವಹನ, ಸಮನ್ವಯ, ಕೊರತೆಯಂತಹ ಬಹು ತಪ್ಪುಗಳು ಪರಿಸ್ಥಿತಿಗೆ ಕಾರಣವಾಗಿವೆ ಎಂದು ದೂರಿದೆ.
ಘಟನೆಗೆ ಕ್ಷಮೆಯಾಚಿಸಿರುವ ಏರ್‌ಲೈನ್ಸ್ ತನ್ನ ಹೇಳಿಕೆಯಲ್ಲಿ, ಬೆಂಗಳೂರಿನಿಂದ ದೆಹಲಿಗೆ ಜಿ8 116 ವಿಮಾನದ ಹೊಂದಾಣಿಕೆಯಲ್ಲಿ ಅಚಾತುರ್ಯದಿಂದ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ ಎಂದು ಹೇಳಿದೆ.
ಮುಂದಿನ 12 ತಿಂಗಳಲ್ಲಿ ಯಾವುದೇ ದೇಶೀಯ ವಲಯದಲ್ಲಿ ಪ್ರಯಾಣಿಸಲು ಎಲ್ಲಾ ಬಾಧಿತ ಪ್ರಯಾಣಿಕರಿಗೆ ಒಂದು ಉಚಿತ ಟಿಕೆಟ್ ನೀಡಲು ಏರ್‌ಲೈನ್ ನಿರ್ಧರಿಸಿದೆ. ಘಟನೆಯ ಬಗ್ಗೆ ತನಿಖೆಯನ್ನು ಸಹ ಪ್ರಾರಂಭಿಸಿದೆ ಎಂದು ಗೋ ಫಸ್ಟ್ ಹೇಳಿದೆ,
ನಿಯಮಗಳ ಉಲ್ಲಂಘನೆಗಾಗಿ ನಿಮ್ಮ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಬಾರದು ಎಂದು ಡಿಜಿಸಿಎ ಏರ್ ಲೈನ್ ನಿಂದ ಪ್ರತಿಕ್ರಿಯೆ ಕೇಳಿದೆ.