ಷೇರು ಮಾರುಕಟ್ಟೆಯಿಂದ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಷೇರು ಮಾರುಕಟ್ಟೆಯಲ್ಲಿ ಬಂಪರ್ ಗಳಿಸಲು ಯೋಜಿಸುತ್ತಿದ್ದರೆ, ಮಲ್ಟಿಬ್ಯಾಗರ್ ಸ್ಟಾಕ್ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆಯಿದೆ. ಇದು ಕೇವಲ ಒಂದು ವರ್ಷದಲ್ಲಿ ಹೂಡಿಕೆದಾರರಿಗೆ ಶೇಕಡಾ 775 ರಷ್ಟು ಆದಾಯವನ್ನು ನೀಡಿದೆ.
ಯಸ್, ಬಂಪರ್ ಗಳಿಸಲು ಅವಕಾಶ ನೀಡ್ತಿರುವ ಮಲ್ಟಿಬ್ಯಾಗರ್ ಸ್ಟಾಕ್, ಅರಿಹಂತ್ ಸೂಪರ್‌ಸ್ಟ್ರಕ್ಚರ್ಸ್. ಈ ಸ್ಟಾಕ್ ಹೂಡಿಕೆದಾರರಿಗೆ 200 ಅಥವಾ 300 ರ ಆದಾಯದ ಬದಲು ಶೇಕಡಾ 775 ಆದಾಯವನ್ನು ನೀಡಿದೆ.
ಶಿಕ್ಷಕರ ನೇಮಕಾತಿ ನಿರೀಕ್ಷೆಯಲ್ಲಿದ್ದವರಿಗೆ ಸಚಿವರಿಂದ ಗುಡ್ ನ್ಯೂಸ್
ಒಂದು ವರ್ಷದ ಹಿಂದೆ ಅಂದರೆ ಅಕ್ಟೋಬರ್ 2020 ರಲ್ಲಿ ಈ ಷೇರಿನ ಬೆಲೆ 20 ರೂಪಾಯಿಯಾಗಿತ್ತು. ಇದು ರಿಯಾಲ್ಟಿ ಸಂಸ್ಥೆಯ ಷೇರು. ಇಂದಿನ ವಹಿವಾಟಿನ ನಂತರ ಷೇರು ಶೇಕಡಾ 5.49 ರಷ್ಟು ಏರಿಕೆಯೊಂದಿಗೆ 175.00 ರೂಪಾಯಿಯಾಗಿದೆ.
ಈ ಷೇರು ಒಂದು ತಿಂಗಳಲ್ಲಿ ಸುಮಾರು ಶೇಕಡಾ 18.85 ರಷ್ಟು ಲಾಭ ಗಳಿಸಿದೆ. 6 ತಿಂಗಳ ಆಧಾರದ ಮೇಲೆ ಹೇಳೋದಾದ್ರೆ ಈ ಷೇರು ತನ್ನ ಹೂಡಿಕೆದಾರರಿಗೆ ಶೇಕಡಾ 178 ರಷ್ಟು ಲಾಭವನ್ನು ನೀಡಿದೆ.
ಈ ಸ್ಟಾಕ್‌ನಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ, ಒಂದು ಲಕ್ಷ ರೂಪಾಯಿ 7,75,000 ರೂಪಾಯಿಯಾಗಿದೆ. 6 ತಿಂಗಳ ಹಿಂದೆ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ, 2,78,800 ರೂಪಾಯಿ ಲಾಭ ಸಿಗಲಿದೆ.