ಇತ್ತೀಚಿನ ದಿನಗಳಲ್ಲಿ, ಹಲವಾರು ಪೆನ್ನಿ ಸ್ಟಾಕ್‌ಗಳು ಭಾರೀ ಲಾಭ ತರುತ್ತಿವೆ. ಕೆಲವೇ ತಿಂಗಳುಗಳ ಅವಧಿಯಲ್ಲಿ ಹೂಡಿಕೆದಾರರಿಗೆ ದೊಡ್ಡ ಆದಾಯವನ್ನು ನೀಡುವ ಪೆನ್ನಿ ಸ್ಟಾಕ್‌ಗಳಲ್ಲಿನ ಹೂಡಿಕೆಯು ರಿಸ್ಕಿ ವ್ಯವಹಾರವಾಗಿದ್ದರೂ, ದೊಡ್ಡ ರಿಟರ್ನ್ಸ್ ಕೊಡುವ ಷೇರುಗಳಲ್ಲಿ ಹೂಡಿಕೆ ಮಾಡುವ ಮೂಲಕ ಅನೇಕರು ಅದೃಷ್ಟ ಪರೀಕ್ಷಿಸಿದ್ದಾರೆ.
ಅಂತಹ ಒಂದು ಸ್ಟಾಕ್, ಸೆಲ್ ಮ್ಯಾನುಫ್ಯಾಕ್ಚರಿಂಗ್ ಕಂಪನಿ ಲಿಮಿಟೆಡ್‌ನದ್ದು. ತನ್ನ ಹೂಡಿಕೆದಾರರಿಗೆ ಆರು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ 59,857% ಗಿಂತ ಹೆಚ್ಚಿನ ಲಾಭವನ್ನು ನೀಡಿದೆ ಈ ಕಂಪನಿ. ಸೆಲ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಯ ಸ್ಟಾಕ್ ಬೆಲೆ ಅಕ್ಟೋಬರ್ 27, 2021 ರಂದು 0.35 ಪೈಸೆಯಿಂದ ಆರಂಭಗೊಂಡು ಫೆಬ್ರವರಿ 17, 2022ರ ವೇಳೆಗೆ 209.85 ರೂ.ಗೆ ಏರಿದೆ.
BIG BREAKING: ಚೀನಾಗೆ ಭಾರತದಿಂದ ಮತ್ತೊಂದು ಶಾಕ್, ಮತ್ತೆ 54 ಚೀನೀ ಅಪ್ಲಿಕೇಶನ್ ನಿಷೇಧ
ಅಂದರೆ, ನೀವು ಅಕ್ಟೋಬರ್ 27, 2021ರಂದು 10,000 ರೂ. ಹೂಡಿಕೆ ಮಾಡಿದ್ದರೆ, ನಿಮ್ಮ ಹೂಡಿಕೆಯ ಮೊತ್ತವು ಆರು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ 59,95,714 ರೂ.ಗೆ ಏರುತ್ತಿತ್ತು…!
1969 ರಲ್ಲಿ ಸ್ಥಾಪಿತವಾದ ಸೆಲ್ ಮ್ಯಾನುಫ್ಯಾಕ್ಚರಿಂಗ್ ಕಂ ಲಿಮಿಟೆಡ್ ಒಂದು ಜವಳಿ ತಯಾರಿಕಾ ಕಂಪನಿಯಾಗಿದ್ದು ಅದು ವಿವಿಧ ರೀತಿಯ ನೂಲುಗಳನ್ನು ತಯಾರಿಸುವ ಮತ್ತು ರಫ್ತು ಮಾಡುವ ವ್ಯವಹಾರದಲ್ಲಿದೆ.
ಕಳೆದ ಆರು ತಿಂಗಳುಗಳಲ್ಲಿ ಸಹ, ಕಂಪನಿಯ ಷೇರುಗಳು ಅದ್ಭುತ ಆದಾಯ ಒದಗಿಸಿವೆ. ನವೆಂಬರ್ 16, 2021 ರಂದು, ಈ ಕಂಪನಿಯ ಸ್ಟಾಕ್ ಬೆಲೆಯು 9.75 ರೂ. ಇದ್ದಿದ್ದು ಇದೀಗ ಪ್ರತಿ ಷೇರಿನ ಬೆಲೆಯು 209.85 ರೂ.ಗಳ ಮಟ್ಟ ತಲುಪಿದೆ. ಈ ಮೂಲಕ ಮೂರು ತಿಂಗಳ ಅವಧಿಯಲ್ಲಿ 2000% ಕ್ಕಿಂತ ಹೆಚ್ಚಿನ ಬೆಳವಣಿಗೆಯನ್ನು ಸಾಧಿಸಿದೆ.
ಕಳೆದ ವಾರದಲ್ಲಿ, ಸೆಲ್ ಮ್ಯಾನುಫ್ಯಾಕ್ಚರಿಂಗ್ ಕಂಪನಿ ಲಿಮಿಟೆಡ್‌ನ ಷೇರಿನ ಬೆಲೆಯು 172.15 ರೂ.ನಿಂದ 209.85ರೂಗೆ ಏರಿಕೆ ಕಂಡಿದೆ. ಇದು 21.48% ರಷ್ಟು ಬೆಳವಣಿಗೆಯಾಗಿದೆ. ಜೊತೆಗೆ, ಕಳೆದ ಒಂದು ತಿಂಗಳಲ್ಲಿ, ಕಂಪನಿಯ ಪ್ರತಿ ಶೇರು 72 ರೂ. ರಿಂದ ರೂ. 209.85 ಕ್ಕೆ ಏರಿದೆ, ಕಳೆದ 30 ದಿನಗಳಲ್ಲಿ 190% ರಷ್ಟು ಬೆಳವಣಿಗೆಯನ್ನು ಕಂಪನಿಯ ಶೇರು ಕಂಡುಕೊಂಡಿದೆ.
ಆದಾಗ್ಯೂ, ಪೆನ್ನಿ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡುವಾಗ ಜಾಗರೂಕರಾಗಿರಲು ಹೂಡಿಕೆದಾರರನ್ನು ವಿನಂತಿಸಲಾಗಿದೆ. ಕೆಲವು ಸಂದರ್ಭಗಳಲ್ಲಿ, ಹೂಡಿಕೆದಾರರು ಪೆನ್ನಿ ಸ್ಟಾಕ್‌ಗಳಲ್ಲಿ ಮಾಡಿದ ಹೂಡಿಕೆಯಿಂದ ಅದೃಷ್ಟವನ್ನು ಗಳಿಸುವ ಭರವಸೆಯಲ್ಲಿ ತಮ್ಮ ಹಣವನ್ನು ಕಳೆದುಕೊಂಡಿದ್ದಾರೆ.