ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹೊಸ ಸರ್ಕಾರದಲ್ಲಿ ಹಕ್ಕಾನಿಗಳಿಗೆ ಪ್ರಮುಖ ಖಾತೆಗಳನ್ನು ನೀಡಲಾಗಿದೆ.
ಆಫ್ಘಾನಿಸ್ತಾನದ ನೂತನ ಪ್ರಧಾನಿಯಾಗಿ ಮುಲ್ಲಾ ಮೊಹಮ್ಮದ್ ಹಸನ್ ಅಖುಂದಾನನ್ನು ನೇಮಕ ಮಾಡಲಾಗಿದೆ. ಮುಲ್ಲಾ ಬರಾದರ್ ಅಖುಂದಾ ಉಪ ಪ್ರಧಾನಿಯಾಗಿದ್ದಾರೆ. ಅವರಿಗೆ ವಿದೇಶಾಂಗ ಇಲಾಖೆ ನೀಡಲಾಗಿದೆ.
ಸಿರಾಜುದ್ದೀನ್ ಹಕ್ಕಾನಿಗೆ ಒಳಾಡಳಿತ ಸಚಿವ ಸ್ಥಾನ ನೀಡಲಾಗಿದ್ದು, ಮುಲ್ಲಾ ಯಾಕೂಬ್ ಓಮರ್ ರಕ್ಷಣಾ ಸಚಿವರಾಗಿದ್ದಾರೆ.