ತಾಲಿಬಾನ್ ಸರ್ಕಾರ ಉಪ ಪ್ರಧಾನಿ ಮುಲ್ಲಾ ಅಬ್ದುಲ್ ಘನಿ ಬರಾದಾರ್ ಕಾಬೂಲ್ಗೆ ಮರಳಿದ್ದು ಜಾಗತಿಕ ಉಗ್ರ ಸಿರಾಜುದ್ದೀನ್ ಹಕ್ಕಾನಿ ನೇತೃತ್ವದ ಆಂತರಿಕ ಸಚಿವಾಲಯದಿಂದ ಭದ್ರತೆಯನ್ನು ನಿರಾಕರಿಸಿದ್ದಾನೆ.
ಕಾಬೂಲ್ನ ಗುಪ್ತಚರ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ಕಾಬೂಲ್ನಲ್ಲಿ ಹಕ್ಕಾನಿ ಜೊತೆಗಿನ ಜಟಾಪಟಿಯಲ್ಲಿ ಬರಾದಾರ್ ಗಾಯಗೊಂಡಿದ್ದನು. ಮಂಗಳವಾರ ಕಂದಹಾರ್ನಿಂದ ಬರಾದಾರ್ ಕಾಬೂಲ್ಗೆ ಮರಳಿದ್ದಾನೆ.
ಏಕಾಏಕಿ ನೆಲಕ್ಕಪ್ಪಳಿಸಿದ ʼಡ್ರೋನ್ʼಗಳು…! ಸುರಕ್ಷಿತ ಸ್ಥಳಗಳಿಗೆ ದೌಡಾಯಿಸಿದ ಜನ
ಕೆಲ ಸಮಯದ ಹಿಂದಷ್ಟೇ ಬರಾದಾರ್ ಸಾವನ್ನಪ್ಪಿದ್ದಾನೆ ಎಂಬ ವದಂತಿ ವಿಶ್ವಾದ್ಯಂತ ಹರಿದಾಡಿತ್ತು. ಹಕ್ಕಾನಿ ಜೊತೆಗಿನ ಘರ್ಷಣೆಯಲ್ಲಿ ತಾಲಿಬಾನ್ ಸಹಸಂಸ್ಥಾಪಕ ಬರಾದಾರ್ ಮೃತಪಟ್ಟಿದ್ದ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಸೆಪ್ಟೆಂಬರ್ 13ರಂದು ಬರಾದಾರ್ ಆಡಿಯೋ ಸಂದೇಶ ಕಳುಹಿಸಿ ತಾನಿನ್ನೂ ಬದುಕಿದ್ದೇನೆ ಎಂದು ಹೇಳುವ ಮೂಲಕ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದ.
SHOCKING NEWS: ಪೋಷಕರೇ ಹುಷಾರ್…! ಸಿಲಿಕಾನ್ ಸಿಟಿಯಲ್ಲಿ ಮಕ್ಕಳ ಮಾರಾಟ ದಂಧೆ; ಪೊಲೀಸರನ್ನೇ ಬೆಚ್ಚಿ ಬೀಳಿಸಿದ ಖತರ್ನಾಕ್ ಗ್ಯಾಂಗ್
ಕಾಬೂಲ್ಗೆ ಮರಳಿರುವ ಬರಾದಾರ್ ಹಕ್ಕಾನಿ ಸಚಿವಾಲಯದಿಂದ ಭದ್ರತೆ ನಿರಾಕರಿಸಿದ್ದು ತಾವೇ ಸ್ವಂತ ಭದ್ರತಾ ಪಡೆಯನ್ನು ನಿಯೋಜಿಸಿಕೊಳ್ಳುವುದಾಗಿ ಹೇಳಿದ್ದಾನೆ ಎನ್ನಲಾಗಿದೆ. ಬರಾದಾರ್ ಕಾಬೂಲ್ನಲ್ಲಿ ವಾಸ್ತವ್ಯ ಹೂಡಿದ್ದು, ರಕ್ಷಣಾ ಸಚಿವ ಮುಲ್ಲಾ ಯಾಕೂಬ್ ಇನ್ನೂ ಕಂದಹಾರ್ನಲ್ಲಿಯೇ ಇದ್ದಾನೆ.