ಕೋಲ್ಕತ್ತಾ: ಟಿಎಂಸಿ ಹಿರಿಯ ನಾಯಕ ಮುಕುಲ್ ರಾಯ್ ನಾಪತ್ತೆಯಾಗಿದ್ದಾರೆ. ಅವರ ಕುಟುಂಬ ಸದಸ್ಯರು ಸೋಮವಾರ ತಡರಾತ್ರಿಯಿಂದ ಮುಕುಲ್ ರಾಯ್ ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.
ಮಾಜಿ ರೈಲ್ವೇ ಸಚಿವರ ಪುತ್ರ ಸುಭ್ರಾಗ್ಶು ಅವರ ಪ್ರಕಾರ, ಮುಕುಲ್ ರಾಯ್ ಸೋಮವಾರ ಸಂಜೆ ಇಂಡಿಗೋ ವಿಮಾನದಲ್ಲಿ(ಜಿಇ-898) ದೆಹಲಿಗೆ ತೆರಳಿದ್ದರು. ಮಾಜಿ ರೈಲ್ವೇ ಸಚಿವರು ಭಾನುವಾರ ತಮ್ಮ ಪುತ್ರನೊಂದಿಗೆ ಜಗಳವಾಡಿದ ನಂತರ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಮುಕುಲ್ ರಾಯ್ ಅವರ ಪತ್ನಿ ನಿಧನರಾದಾಗಿನಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಮತ್ತು ಫೆಬ್ರವರಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.
ಕುಟುಂಬವು ವಿಮಾನ ನಿಲ್ದಾಣ ಪೊಲೀಸ್ ಅಧಿಕಾರಿಗಳಿಗೆ ದೂರು ಸಲ್ಲಿಸಿದೆ ಎಂದು ಸುಭಾರ್ಗ್ಶು ರಾಯ್ ಹೇಳಿದ್ದರೂ, ಯಾವುದೇ ಅಧಿಕೃತ ವರದಿ ಇನ್ನೂ ಬಂದಿಲ್ಲ ಎಂದು ಪೊಲೀಸ್ ಮೂಲಗಳು ಸೂಚಿಸಿವೆ.
ಸೋಮವಾರ ಸಂಜೆಯಿಂದ ತನ್ನ ತಂದೆಯನ್ನು ಪತ್ತೆ ಹಚ್ಚಲಾಗುತ್ತಿಲ್ಲ ಅವರು ಕಾಣೆಯಾಗಿದ್ದಾರೆ ಎಂದು ಸುಭ್ರಾಗ್ಶು ತಿಳಿಸಿದರು.
ಟಿಎಂಸಿಯಲ್ಲಿ ಮಾಜಿ ನಂಬರ್ 2 ಆಗಿದ್ದ ರಾಯ್, ಪಕ್ಷದ ನಾಯಕತ್ವದೊಂದಿಗಿನ ಭಿನ್ನಾಭಿಪ್ರಾಯಗಳ ನಂತರ 2017 ರಲ್ಲಿ ಬಿಜೆಪಿ ಸೇರಿದ್ದರು. ಅವರನ್ನು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಮಾಡಲಾಯಿತು.
ರಾಯ್ 2021 ರ ವಿಧಾನಸಭಾ ಚುನಾವಣೆಯಲ್ಲಿ ನಾಡಿಯಾ ಜಿಲ್ಲೆಯ ಕೃಷ್ಣನಗರ ಉತ್ತರ ಅಸೆಂಬ್ಲಿ ಸ್ಥಾನದಿಂದ ಬಿಜೆಪಿ ಟಿಕೆಟ್‌ನಲ್ಲಿ ಗೆದ್ದರು. ಫಲಿತಾಂಶಗಳು ಪ್ರಕಟವಾದ ನಂತರ ಟಿಎಂಸಿಗೆ ಮರಳಿದರು.
2019 ರ ಲೋಕಸಭೆ ಚುನಾವಣೆಗೆ ಬಿಜೆಪಿಯ ಬಂಗಾಳ ತಂತ್ರದ ಹಿಂದೆ ಅವರು ಪ್ರಮುಖ ನಾಯಕರಾಗಿದ್ದರು, ಕೇಸರಿ ಪಕ್ಷವು ರಾಜ್ಯದ ಒಟ್ಟು 42 ಸ್ಥಾನಗಳಲ್ಲಿ 18 ಸ್ಥಾನಗಳನ್ನು ಗೆದ್ದುಕೊಂಡಿತು.