2019 ರಲ್ಲಿ ಕೆಬಿಸಿಯಲ್ಲಿ ರಾಮಾಯಣದ ಬಗ್ಗೆ ಕೇಳಿದ ಒಂದು ಪ್ರಶ್ನೆಗೆ ನಟಿ ಸೋನಾಕ್ಷಿ ಸಿನ್ಹಾ ಅವರಿಗೆ ಉತ್ತರಿಸಲು ಸಾಧ್ಯವಾಗದ ಕಾರಣಕ್ಕೆ ಅದು ಅವಳ ತಂದೆ ಶತ್ರುಘ್ನ ಸಿನ್ಹಾ ಅವರ ತಪ್ಪು ಎಂದು ಹೇಳಿದ ನಂತರ ಸೋನಾಕ್ಷಿ ಸಿನ್ಹಾ, ಮುಕೇಶ್ ಖನ್ನಾ ಅವರನ್ನು ಟೀಕಿಸಿದ್ದರು. ಈಗ, ನ್ಯೂಸ್ 9 ಗೆ ನೀಡಿದ ಸಂದರ್ಶನದಲ್ಲಿ, ಹಿರಿಯ ನಟ, ಸೋನಾಕ್ಷಿ ಅವರ ಟೀಕೆಗೆ ಪ್ರತಿಕ್ರಿಯಿಸಿದ್ದು, ಯಾವುದೇ ದುರುದ್ದೇಶವಿರಲಿಲ್ಲ ಎಂದು ಹೇಳಿದ್ದಾರೆ.
ಮುಕೇಶ್ ಖನ್ನಾ “ಆಕೆ ಪ್ರತಿಕ್ರಿಯಿಸಲು ಇಷ್ಟು ಸಮಯ ತೆಗೆದುಕೊಂಡಿದ್ದು ಆಶ್ಚರ್ಯಕರವಾಗಿದೆ” ಎಂದು ಹೇಳಿದರಲ್ಲದೇ “ಕೌನ್ ಬನೇಗಾ ಕರೋಡ್ಪತಿ” ಶೋನಲ್ಲಿನ ಆ ಘಟನೆಯಿಂದ ಅವರ ಹೆಸರನ್ನು ತೆಗೆದುಕೊಳ್ಳುವ ಮೂಲಕ ನಾನು ಅವರನ್ನು ಕೆರಳಿಸುತ್ತಿದ್ದೇನೆ ಎಂದು ನನಗೆ ತಿಳಿದಿತ್ತು. ಆದರೆ ಸೋನಾಕ್ಷಿ ಅಥವಾ ಹಿರಿಯರಾದ ಅವರ ತಂದೆಯನ್ನು ದೂಷಿಸುವ ಯಾವುದೇ ದುರುದ್ದೇಶ ನನಗೆ ಇರಲಿಲ್ಲ. ನನ್ನೊಂದಿಗೆ ಅವರ ಸೌಹಾರ್ದಯುತ ಸಂಬಂಧವಿದೆ.” ಎಂದಿದ್ದಾರೆ
ಸೋನಾಕ್ಷಿ ಸಿನ್ಹಾ ಏನು ಹೇಳಿದ್ದರು “
2019 ರಲ್ಲಿ, ಸೋನಾಕ್ಷಿ ಸಿನ್ಹಾ, ಕೆಬಿಸಿ 11 ರಲ್ಲಿ ಭಾಗವಹಿಸಿದ್ದು, ಅದರಲ್ಲಿ ಅವರಿಗೆ ರಾಮಾಯಣದಲ್ಲಿ ಹನುಮಂತನು ಯಾರಿಗಾಗಿ ಸಂಜೀವಿನಿ ತಂದನು ಎಂದು ಕೇಳಲಾಗಿತ್ತು, ಆದರೆ ಅವರು ಸರಿಯಾಗಿ ಉತ್ತರಿಸಲು ಸಾಧ್ಯವಾಗಿರಲಿಲ್ಲ. ಇತ್ತೀಚೆಗೆ ಸಿದ್ಧಾರ್ಥ್ ಕನ್ನನ್ ಅವರೊಂದಿಗೆ ನಡೆಸಿದ ಸಂದರ್ಶನದಲ್ಲಿ, ಮುಕೇಶ್, ರಾಮಾಯಣದ ಬಗ್ಗೆ ಸೋನಾಕ್ಷಿಗೆ ಕಲಿಸದ ಕಾರಣಕ್ಕೆ ಶತ್ರುಘ್ನ ಸಿನ್ಹಾ ಅವರನ್ನು ದೂಷಿಸಿದ್ದರು. ನಂತರ ಸೋನಾಕ್ಷಿ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಮುಕೇಶ್ ಖನ್ನಾ ಅವರನ್ನು ಟೀಕಿಸಿದ್ದರು.