ರಿಲೈಯನ್ಸ್‌ನ ಮುಕೇಶ್ ಅಂಬಾನಿ ಕಂಪನಿಯ ಷೇರು ಶುಕ್ರವಾರದ ಷೇರುಪೇಟೆಯಲ್ಲಿ ಶೇಕಡಾ ನಾಲ್ಕರಷ್ಟು ಏರಿದ ಕಾರಣ ಅವರ ಒಟ್ಟು ಆಸ್ತಿ 3.7 ಬಿಲಿಯನ್ ಡಾಲರ್ ಅಷ್ಟು ಹೆಚ್ಚಳವಾಗಿದೆ.
ಅಂಬಾನಿಯ ಆಸ್ತಿಯು 92.60 ಬಿಲಿಯನ್ ಇದೆ ಎಂದು ಹೇಳಲಾಗುತ್ತದೆ. ಬ್ಲೂಮ್ಬರ್ಗ್ ಸಂಸ್ಥೆಯ ಬಿಲಿಯನ್ ಹಣ ಹೊಂದಿರುವವರ ಪಟ್ಟಿಯಲ್ಲಿ ಅಂಬಾನಿಯೂ ಜಗತ್ತಿನಲ್ಲಿ ಹನ್ನೆರಡನೇ ಶ್ರೀಮಂತ ಎನ್ನಿಸಿಕೊಂಡಿದ್ದಾರೆ. ಇದೆ ಪಟ್ಟಿಯ ಮೊದಲೆರೆಡು ಸ್ಥಾನವನ್ನು ಅಮೆಜಾನ್
ನ ಜೆಫ್ ಬೆಝೋಸ್ ಹಾಗು ಟೆಸ್ಲಾ ಕಂಪನಿಯ ಎಲಾನ್ ಮಸ್ಕ್ ಪಡೆದಿದ್ದರೆ. ಇವರಿಬ್ಬರ ಆಸ್ತಿ 201 ಬಿಲಿಯನ್ ಡಾಲರ್ ಮತ್ತು 199 ಬಿಲಿಯನ್ ಡಾಲರ್ ಆಗಿರುತ್ತದೆ.
ಗಮನಿಸಿ: ಜನ ಸಾಮಾನ್ಯರ ಮೇಲೆ ಪರಿಣಾಮ ಬೀರುತ್ತೆ ಸೆಪ್ಟೆಂಬರ್ ತಿಂಗಳಿನಲ್ಲಾಗಿರುವ ಈ ಎಲ್ಲ ಬದಲಾವಣೆ
ರಿಲಯನ್ಸ್ ಅವರು ಜಸ್ಟ್ ಡಯಲ್ ಕೊಂಡುಕೊಂಡ ನಂತರ ನ್ಯಾಷನಲ್ ಸ್ಟಾಕ್ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾಗಿದೆ. ಇವರ ಕಂಪನಿಯು ಇದೆ ಜುಲೈನಿಂದ ಶೇಕಡ 13 ರಷ್ಟು ಹೆಚ್ಚಾಗಿದೆ. ಆದರೆ ಜೂನ್ ವೇಳೆಯಲ್ಲಿ ಕೋವಿಡ್ ಅಲೆಯಿಂದ ಕೊಂಚ ನಷ್ಟ ಆಗಿತ್ತು.