alex Certify ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ‘ಆಂಟಿಲಿಯಾ’ ಮನೆ ಮೇಲೆ ರಾರಾಜಿಸಿದ ‘ಜೈ ಶ್ರೀ ರಾಮ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ‘ಆಂಟಿಲಿಯಾ’ ಮನೆ ಮೇಲೆ ರಾರಾಜಿಸಿದ ‘ಜೈ ಶ್ರೀ ರಾಮ್’

ಮುಂಬೈ: ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆಗೆ ಮುನ್ನ ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಮನೆ ‘ಆಂಟಿಲಿಯಾ’ ನಿವಾಸವನ್ನು ಸಂಪೂರ್ಣವಾಗಿ ಅಲಂಕರಿಸಲಾಗಿದೆ.

ಅಯೋಧ್ಯೆಯ ರಾಮಮಂದಿರದಲ್ಲಿ ರಾಮ್ ಲಲ್ಲಾನ ಪ್ರತಿಷ್ಠಾಪನೆ ಸಮಾರಂಭಕ್ಕೆ ಆಹ್ವಾನವನ್ನು ಸ್ವೀಕರಿಸಿದ ಭಾರತೀಯ ಉದ್ಯಮದ ಜನರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಸಿಎಂಡಿ ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬ, ಪ್ರಸಿದ್ಧ ಭಾರತೀಯ ಉದ್ಯಮಿ ರತನ್ ಟಾಟಾ, ಕೈಗಾರಿಕೋದ್ಯಮಿ ಗೌತಮ್ ಅದಾನಿ ಸೇರಿದ್ದಾರೆ.

‘ಆಂಟಿಲಿಯಾ’ ನಿವಾಸವನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ಮನೆಯನ್ನು ಹೂವಿನ ಗುಚ್ಛಗಳು ಮತ್ತು ಬಣ್ಣಬಣ್ಣದ ದೀಪಗಳಿಂದ ಅಲಂಕರಿಸಲಾಗಿದೆ. ಭಗವಾನ್ ರಾಮನನ್ನು ಸ್ವಾಗತಿಸಲು ಆಂಟಿಲಿಯಾದ ಇತರ ಭಾಗಗಳನ್ನು ಸಹ ಅಲಂಕರಿಸಲಾಗಿದೆ. ಹಿಂದೂ ಧರ್ಮದ ಚಿಹ್ನೆಗಳು ಮತ್ತು ಭಗವಾನ್ ರಾಮನಿಗೆ ಸಂಬಂಧಿಸಿದ ಚಿತ್ರಗಳನ್ನು ಮನೆಯ ಒಳಗೆ ಮತ್ತು ಹೊರಗೆ ಸ್ಥಾಪಿಸಲಾಗಿದೆ. ಅಲಂಕಾರದಿಂದ ಮನೆ ಕಂಗೊಳಿಸುತ್ತಿದೆ.

ಅಯೋಧ್ಯೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಂಬಾನಿ ಕುಟುಂಬ ಉತ್ಸುಕವಾಗಿದೆ. ಇದೊಂದು ಐತಿಹಾಸಿಕ ಕ್ಷಣವಾಗಿದ್ದು, ಈ ಸಂದರ್ಭದಲ್ಲಿ ಭಾಗಿಯಾಗಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ.

ಆಂಟಿಲಿಯಾ ವಿಶೇಷತೆ

ಇದು 4,00,000 ಚದರ ಅಡಿಗಳಲ್ಲಿ ಹರಡಿದೆ.

ಆಂಟಿಲಿಯಾದಲ್ಲಿ 600 ಉದ್ಯೋಗಿಗಳು ಕೆಲಸ ಮಾಡುತ್ತಾರೆ.

ಇದು 6 ಮಹಡಿಗಳ ಕಾರ್ ಪಾರ್ಕಿಂಗ್ ಹೊಂದಿದೆ.

ಆಂಟಿಲಿಯಾ ಖಾಸಗಿ ಚಿತ್ರಮಂದಿರ, 3 ಹೆಲಿಪ್ಯಾಡ್‌ಗಳು, ಹ್ಯಾಂಗಿಂಗ್ ಗಾರ್ಡನ್ಸ್ ಮತ್ತು ಐಸ್ ಕ್ರೀಮ್ ಪಾರ್ಲರ್ ಅನ್ನು ಹೊಂದಿದೆ.

ಇದು ಸ್ಪಾ ಮತ್ತು ಯೋಗ ಕೇಂದ್ರವನ್ನೂ ಹೊಂದಿದೆ.

ಭೂಕಂಪಗಳು ಮತ್ತು ಇತರ ನೈಸರ್ಗಿಕ ವಿಕೋಪಗಳಿಂದ ರಕ್ಷಣೆ ಪಡೆಯಲು ಈ ಮನೆಯನ್ನು ವಿನ್ಯಾಸಗೊಳಿಸಲಾಗಿದೆ.

ಮುಕೇಶ್ ಅಂಬಾನಿ ಅವರ ಮನೆ ಆಂಟಿಲಿಯಾ ವಿಶ್ವದ ಅತ್ಯಂತ ದುಬಾರಿ ಮತ್ತು ಸುರಕ್ಷಿತ ಕಟ್ಟಡವೆಂದು ಪರಿಗಣಿಸಲಾಗಿದೆ. ಇದು ಮುಂಬೈನ ಅಲ್ಟಾಮೌಂಟ್ ರಸ್ತೆಯಲ್ಲಿದೆ ಮತ್ತು 27 ಮಹಡಿಗಳನ್ನು ಹೊಂದಿದೆ. ಆಂಟಿಲಿಯಾ ಸರಿಸುಮಾರು 568 ಅಡಿ ಎತ್ತರವಿದೆ ಮತ್ತು ಪ್ರತಿ ಮಹಡಿಯಲ್ಲಿ ಟೆರೇಸ್‌ಗಳನ್ನು ಹೊಂದಿದೆ. ಪ್ರತಿ ಮಹಡಿಯು ಎರಡು ಅಂತಸ್ತಿನ ಕಟ್ಟಡದಷ್ಟು ಎತ್ತರವಾಗಿದೆ. ಮನೆ ಎಷ್ಟು ಬಲಿಷ್ಠವಾಗಿದೆ ಎಂದರೆ ರಿಕ್ಟರ್ ಮಾಪಕದಲ್ಲಿ 8ರ ಭೂಕಂಪವನ್ನು ಸುಲಭವಾಗಿ ತಡೆದುಕೊಳ್ಳಬಲ್ಲದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...